LIVE - ‘ನೀವು ಅಪರಾಧಿಗಳನ್ನು ಹೇಗೆ ರಕ್ಷಿಸುತ್ತೀರಿ?’: ಪ್ರತಿಪಕ್ಷಗಳಿಗೆ ಮೋದಿ ಪ್ರಶ್ನೆ
ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ : ಪ್ರಧಾನಿ ನರೇಂದ್ರ ಮೋದಿ ಭಾಷಣ

Photo : Sansad TV
ಹೊಸದಿಲ್ಲಿ :“10 ವರ್ಷಗಳ ಹಿಂದೆ, ದೇಶದಲ್ಲಿ ವ್ಯಾಪಕವಾಗಿರುವ ಹಗರಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಂಸತ್ತು ಒತ್ತಾಯಿಸಿತು. ಈಗ ಭ್ರಷ್ಟರು ಕ್ರಮ ಎದುರಿಸುತ್ತಿದ್ದಾರೆ ಎಂದು ಕೋಪಗೊಂಡಿದ್ದೀರಿ. ನೀವು ಆರೋಪಿಗಳನ್ನು ರಕ್ಷಿಸುತ್ತಿದ್ದೀರಿ” ಎಂದು ಈಡಿ ದಾಳಿ ಕುರಿತು ಪ್ರತಿಪಕ್ಷಗಳ ಟೀಕೆಗಳಿಗೆ ಪ್ರಧಾನಿ ಮೋದಿ ಉತ್ತಿರಿಸಿದರು.
ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿರುವ ಪ್ರಧಾನಿ ಮೋದಿ, ಜನ್ ಧನ್ ಖಾತೆಗಳ ಮೂಲಕ, ಕೇಂದ್ರ ಸರ್ಕಾರವು 30 ಲಕ್ಷ ಕೋಟಿ ತೆರಿಗೆ ತಪ್ಪಿಸುವ ಮೋಸದ ಖಾತೆಗಳನ್ನು ಅಳಿಸಿದೆ” ಎಂದು ಹೇಳಿದ್ದಾರೆ.
ಸರಿಯಾದ ಸಹಾಯ ಸಿಕ್ಕರೆ, ನಮ್ಮ ದೇಶದ ಬಡವರು ಬಡತನವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇಂದು ನಮ್ಮ ದೇಶದ 50 ಕೋಟಿ ಬಡವರು ಬ್ಯಾಂಕ್ ಖಾತೆ ಹೊಂದಿದ್ದಾರೆ, ನಾಲ್ಕು ಕೋಟಿ ಮಂದಿ ಮನೆ ಹೊಂದಿದ್ದಾರೆ. 11 ಕೋಟಿಗೂ ಹೆಚ್ಚು ಬಡವರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಿದೆ. 55 ಕೋಟಿಗೂ ಹೆಚ್ಚು ಬಡವರು ಆಯುಷ್ಮಾನ್ ಭಾರತ್ ಕಾರ್ಡ್ ಪಡೆದಿದ್ದಾರೆ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.
“ನಮ್ಮ ಮುಂದಿನ ಸರ್ಕಾರವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಡವರನ್ನು ಬಡತನದಿಂದ ಮೇಲೆತ್ತಲು ಹಲವಾರು ಯೋಜನೆಗಳನ್ನು ನೀಡಿದ್ದೇವೆ - ವಸತಿ, ನೀರು, ವೈದ್ಯಕೀಯ ಸೇವೆ, ಬ್ಯಾಂಕ್ ಖಾತೆಗಳು, ವಿದ್ಯುತ್, ಪಡಿತರ, ಆಹಾರ ಭದ್ರತೆ, ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ” ಎಂದುರ ಅವರು ಹೇಳಿದರು.
“ಕರ್ಪೂರಿ ಠಾಕೂರ್ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶ್ರಮಿಸಿದ ರೀತಿ ನಿಜಕ್ಕೂ ಖೇದನೀಯ. ಹಿಂದುಳಿದ ವರ್ಗಗಳ ಉನ್ನತಿಗೆ ಶ್ರಮಿಸಿದ ಠಾಕೂರ್ರನ್ನು ಕಾಂಗ್ರೆಸ್ ಅವಮಾನಿಸಿತು. ಕರ್ಪೂರಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದೇವೆ. ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಎಷ್ಟು ಒಬಿಸಿ ಜನರು ಸರ್ಕಾರಿ ಹುದ್ದೆಗಳಲ್ಲಿದ್ದಾರೆ ಎಂದು ಅವರು ಕೇಳುತ್ತಲೇ ಇರುತ್ತಾರೆ. ಅವರು ತಮ್ಮ ಮುಂದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ನೋಡುವುದಿಲ್ಲವೇ? ಎಂದು ತಮ್ಮನ್ನೇ ಗುರಿಯಾಗಿಸಿ ಮೋದಿ ಪ್ರತಿಪಕ್ಷಗಳನ್ನು ಟೀಕಿಸಿದರು.
ಮೋದಿ ಭಾಷಣದ ಲೈವ್ ಅಪ್ಡೇಟ್ ಇಲ್ಲಿದೆ.
Live Updates
- 5 Feb 2024 6:01 PM IST
2024ರ ಚುನಾವಣೆಯಲ್ಲಿ ಎನ್ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳು ಸಿಗಲಿದೆ. ಬಿಜೆಪಿಗೆ 370ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ: ಮೋದಿ
- 5 Feb 2024 5:49 PM IST
ನೀವು ಬಹುಕಾಲ ವಿರೋಧ ಪಕ್ಷದಲ್ಲಿರುವಿರಿ
“ದಶಕದಿಂದ ವಿರೋಧ ಪಕ್ಷದಲ್ಲಿ ಕುಳಿತುಕೊಂಡಿರುವ ಪ್ರತಿಪಕ್ಷಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಪ್ರತಿಪಕ್ಷ ಸ್ಥಾನದಲ್ಲೇ ಕುಳಿತುಕೊಳ್ಳುವಿರಿ” ಎಂದು ಮೋದಿ ಹೇಳಿದ್ದಾರೆ.







