ಮೋದಿಯವರ ಜಾಕೆಟ್ ನ ಜೇಬಿನಲ್ಲಿದ್ದ ತ್ರಿವರ್ಣ ಬಟ್ಟೆ ಐರ್ಲೆಂಡ್ ನ ಧ್ವಜದಂತಿದೆ: ಪವನ್ ಖೇರಾ ವ್ಯಂಗ್ಯ

Photo credit: X/@Pawankhera
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡುವ ವೇಳೆ ಧರಿಸಿದ್ದ ಜಾಕೆಟ್ ನ ಜೇಬಿನಲ್ಲಿದ್ದ ತ್ರಿವರ್ಣ ಬಣ್ಣದ ಬಟ್ಟೆ ಕುರಿತು ಕಾಂಗ್ರೆಸ್ ನಾಯಕ ಪವನ್ ಖೇರಾ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಅವರ ಚಿತ್ರವನ್ನು Xನಲ್ಲಿ ಹಂಚಿಕೊಂಡಿರುವ ಖೇರಾ, ಜಾಕೆಟ್ನ ಜೇಬಿನಲ್ಲಿದ್ದ ತ್ರಿವರ್ಣ ಬಣ್ಣದ ಬಟ್ಟೆಯ ವಿನ್ಯಾಸವು ಐರ್ಲೆಂಡ್ನ ತ್ರಿವರ್ಣ ಧ್ವಜವನ್ನು ಹೋಲುತ್ತದೆ ಎಂದು ಟೀಕಿಸಿದ್ದಾರೆ.
‘ಲಗ್ತಾ ಹೈ ಸಾಹಿಬ್ ನೆ ಉರ್ದು ಮೇ ತಿರಂಗಾ ಪೆಹ್ನಾ ಹೈ. ಯಾ ಫಿರ್ ಭಾರತ್ ಕಿ ಜಗ ಐರ್ಲೆಂಡ್ ಕಾ ಸ್ವಾತಂತ್ರ್ಯ ದಿನ್ ಮನಾ ರಹೇ ಹೈ’ (ಸಾಹಿಬ್ ಉರ್ದುವಿನಲ್ಲಿ ತ್ರಿವರ್ಣ ಧ್ವಜವನ್ನು ಧರಿಸಿರುವಂತೆ ಕಾಣುತ್ತಿದೆ. ಅಥವಾ ಬಹುಶಃ ಭಾರತದ ಬದಲು ಐರ್ಲೆಂಡ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದಾರೆ) ಎಂದು ಖೇರಾ Xನಲ್ಲಿ ಬರೆದಿದ್ದಾರೆ.
ಸತತ 13ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಪ್ರಧಾನಿ ಮೋದಿ
ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಅವರು ಸತತ 13ನೇ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದರು.
ಸತತ 13ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕಾಗಿ ಮೋದಿ ಅವರು ಆಕರ್ಷಕ ಪೇಟದೊಂದಿಗೆ ಗರಿಗರಿಯಾದ ಬಿಳಿ, ಉದ್ದ ತೋಳಿನ ಕುರ್ತಾ ಮತ್ತು ಅದಕ್ಕೆ ಹೊಂದಿಕೆಯಾಗುವ ಪೈಜಾಮಾ ಧರಿಸಿದ್ದರು. ಕಂದು ಬಣ್ಣದ ನೆಹರೂ ಜಾಕೆಟ್ ಮತ್ತು ಜಾಕೆಟ್ ನ ಜೇಬಿನಲ್ಲಿದ್ದ ತ್ರಿವರ್ಣ ಬಣ್ಣದ ಬಟ್ಟೆಯಿರುವ ಉಡುಪನ್ನು ಧರಿಸಿದ್ದರು.
ಹಳದಿ ಮತ್ತು ಬಿಳಿ ಬಂಧನಿ ವಿನ್ಯಾಸವಿರುವ ಕೆಂಪು ಪೇಟಾ ಅವರು ಧರಿಸಿದ್ದರು.






