ಪೆಟ್ರೋಲ್, ಡೀಸೆಲ್ ದರದಲ್ಲಿ ತತ್ಕ್ಷಣ ಏರಿಕೆ ಇಲ್ಲ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮಾ. 9: ಅಂತರ ರಾಷ್ಟ್ರೀಯ ಕಚ್ಚಾ ತೈಲದ ದರ ಬ್ಯಾರೆಲ್ಗೆ 100 ಅಮೆರಿಕ ಡಾಲರ್ ದಾಟಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಸದ್ಯಕ್ಕೆ ಹೆಚ್ಚಿಸುವುದಿಲ್ಲ ಎಂದು ಸರಕಾರದ ಮೂಲಗಳು ಸೋಮವಾರ ತಿಳಿಸಿವೆ.
ದೇಶಾದ್ಯಂತ ನಿರಂತರ ಇಂಧನ ಪೂರೈಕೆಯನ್ನು ನಿರ್ವಹಿಸಲು ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವು ಹೇಳಿವೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ 10ನೇ ದಿನಕ್ಕೆ ಕಾಲಿಲಿಸಿದ್ದು, ವಿಶ್ವ ಮಾರುಕಟ್ಟೆ ಕುಸಿಯುತ್ತಿದೆ. ಅಂತರ ರಾಷ್ಟ್ರೀಯ ಮಾನದಂಡವಾಗಿ ಬಳಸುವ ಬ್ರೆಂಟ್ ಕಚ್ಚಾ ತೈಲದ ದರ ಬ್ಯಾರಲ್ಗೆ ಸುಮಾರು 120 ಅಮೆರಿಕ ಡಾಲರ್ಗೆ ಏರಿಕೆಯಾಗಿದೆ. ಯುದ್ಧ ಆರಂಭವಾಗುವ ಇದ್ದ ಬೆಲೆಗಿಂತ ಇದು ಶೇ. 65ರಷ್ಟು ಹೆಚ್ಚಾಗಿದೆ. ಆದರೆ, ಅನಂತರ ಕುಸಿಯಲು ಪ್ರಾರಂಭಿಸಿದೆ ಎಂದು ಅವು ಹೇಳಿವೆ.
ಸರಕಾರ ಜಾಗತಿಕ ತೈಲ ಮಾರುಕಟ್ಟೆಯನ್ನು ನಿಕಟವಾಗಿ ಗಮನಿಸುತ್ತಿದೆ. ಆದರೆ, ಚಿಲ್ಲರೆ ಇಂಧನ ಬೆಲೆಯನ್ನು ಏರಿಸುವ ಯಾವುದೇ ತತ್ಕ್ಷಣದ ಯೋಜನೆ ಇಲ್ಲ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಮುಂದಿನ 6-8 ವಾರಗಳ ಅವಶ್ಯಕತೆಗಳನ್ನು ಪೂರೈಸಲು ದೇಶವು ಕಚ್ಚಾ ತೈಲ ಹಾಗೂ ಸಿದ್ಧಪಡಿಸಿದ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ. ಆದರೂ ಅನಿಲ (ಎಲ್ಪಿಜಿ) ರಿಫಿಲ್ ಆರ್ಡರ್ ಮಾಡುವ ನೀತಿಯಲ್ಲಿ ಸರಕಾರ ಸ್ವಲ್ಪ ಬದಲಾವಣೆ ಮಾಡಿದೆ ಎಂದು ಮೂಲಗಳು ಹೇಳಿವೆ.
·





