ಪೆಟ್ರೋಲ್, ಡೀಸೆಲ್ ಬೆಲೆ ತಲಾ 3ರೂ. ಏರಿಕೆ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

ಹೊಸದಿಲ್ಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆ ಶುಕ್ರವಾರ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 3ರೂ. ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ದರ ಹೆಚ್ಚಳದ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂ.ಗಳಿಂದ 97.77 ರೂ.ಗಳಿಗೆ ಏರಿಕೆಯಾದರೆ, ಡೀಸೆಲ್ ದರ ಲೀಟರ್‌ಗೆ 87.67 ರೂ.ಗಳಿಂದ 90.67 ರೂ.ಗೆ ಏರಿಕೆಯಾಗಿದೆ.
ಇತರ ಮಹಾನಗರಗಳಲ್ಲಿಯೂ ಪೆಟ್ರೋಲ್ ಬೆಲೆ ಪರಿಷ್ಕರಣೆಯಾಗಿದ್ದು, ಕೋಲ್ಕತ್ತಾದಲ್ಲಿ ಲೀಟರ್‌ಗೆ 108.74 ರೂ., ಮುಂಬೈನಲ್ಲಿ 106.68 ರೂ. ಮತ್ತು ಚೆನ್ನೈನಲ್ಲಿ 103.67 ರೂ. ತಲುಪಿದೆ.
ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 95.13 ರೂ., ಮುಂಬೈನಲ್ಲಿ 93.14 ರೂ. ಮತ್ತು ಚೆನ್ನೈನಲ್ಲಿ 95.25 ರೂ.ಗಳಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 106.17 ಮತ್ತು ಡೀಸೆಲ್ ದರ 94.10 ರೂ.ಗೆ ತಲುಪಿದೆ.
ಈ ಮಧ್ಯೆ ದಿಲ್ಲಿಯಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2 ರೂ. ಹೆಚ್ಚಿಸಲಾಗಿದೆ. ನಿನ್ನೆಯವರೆಗೆ 85 ರೂ. ಇದ್ದ ದರ ಈಗ 87 ರೂ.ಗೆ ಏರಿಕೆಯಾಗಿದೆ.




