ಮೋದಿ ಅದಾನಿಯ ಪ್ರಧಾನಿ : ಸಂಜಯ ಸಿಂಗ್

Photo : PTI
ಹೊಸದಿಲ್ಲಿ: ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಲ್ಲ, ಅವರು ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಪ್ರಧಾನಿಯಾಗಿದ್ದಾರೆ ಎಂದು ಆಪ್ ಸಂಸದ ಸಂಜಯ ಸಿಂಗ್ ಅವರು ಶುಕ್ರವಾರ ಕುಟುಕಿದ್ದಾರೆ. ದಿಲ್ಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ಸಿಂಗ್ ಅವರನ್ನು ಶುಕ್ರವಾರ ಇಲ್ಲಿಯ ರೌಸ್ ಅವೆನ್ಯು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
ವೈರಲ್ ಆಗಿರುವ ವೀಡಿಯೊ ತೋರಿಸಿರುವಂತೆ ನ್ಯಾಯಾಲಯ ಪ್ರವೇಶಕ್ಕೆ ಮುನ್ನ ಪೊಲೀಸರ ಬೆಂಗಾವಲಿನಲ್ಲಿದ್ದ ಸಿಂಗ್ ಮಾಧ್ಯಮ ಪ್ರತಿನಿಧಿಗಳು ಕಣ್ಣಿಗೆ ಬಿದ್ದ ತಕ್ಷಣ ಅವಕಾಶವನ್ನು ಬಳಸಿಕೊಂಡು,ಮೋದಿ ಭಾರತದ ಪ್ರಧಾನಿಯಲ್ಲ,ಅವರು ಅದಾನಿಯವರ ಪ್ರಧಾನಿಯಾಗಿದ್ದಾರೆ. ಅದಾನಿ ಹಗರಣದಲ್ಲಿ ತನಿಖೆ ಯಾವಾಗ ನಡೆಯುತ್ತದೆ ಎಂದು ಕೇಳಿದ್ದಾರೆ.
ಶುಕ್ರವಾರ ನ್ಯಾಯಾಲಯವು ಅವರಿಗೆ ಅ.17ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
Next Story





