ಪಂಜಾಬ್ | ಅಪಘಾತದ ಬಳಿಕ ಎಲ್ಪಿಜಿ ಇಂಧನ ಟ್ಯಾಂಕರ್ ಸ್ಪೋಟ : 7 ಮಂದಿ ಮೃತ್ಯು, ಹಲವರಿಗೆ ಗಾಯ

PC|indiatoday.in
ಚಂಡೀಗಢ: ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಬಳಿಕ ಎಲ್ಪಿಜಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 7 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ತಡ ರಾತ್ರಿ ಹೋಶಿಯಾರ್ ಜಲಂಧರ್ ರಸ್ತೆಯಲ್ಲಿನ ಮಂಡಿಯಾಲ ಅಡ್ಡ ಬಳಿ ನಡೆದಿದೆ. ಈ ಅಪಘಾತದಲ್ಲಿ ಇತರ 15 ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಚಾಲಕ ಸುಖ್ಜೀತ್ ಸಿಂಗ್, ಬಲ್ವಂತ್ ರೈ, ಧರ್ಮೇಂದರ್ ವರ್ಮ, ಮಂಜಿತ್ ಸಿಂಗ್, ವಿಜಯ್, ಜಸ್ವಿಂದರ್ ಕೌರ್ ಹಾಗೂ ಆರಾಧನ ವರ್ಮ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಗಾಯಾಳುಗಳನ್ನು ಬಲ್ವಂತ್ ಸಿಂಗ್ (55), ಹರ್ಬನ್ಸ್ ಲಾಲ್ (60), ಅಮರ್ಜೀತ್ ಕೌರ್ (50), ಸುಖ್ಜೀತ್ ಕೌರ್, ಜ್ಯೋತಿ, ಸುಮನ್, ಗುರ್ಮುಖ್ ಸಿಂಗ್, ಹರ್ಪ್ರೀತ್ ಕೌರ್, ಕುಸುಮ, ಭಗವಾನ್ ದಾಸ್, ಲಾಲಿ ವರ್ಮ, ಸೀತಾ, ಅಜಯ್, ಸಂಜಯ್, ರಾಘವ್ ಹಾಗೂ ಪೂಜಾ ಎಂದು ಗುರುತಿಸಲಾಗಿದೆ. ಈ ಪೈಕಿ ಕೆಲವರು ಈಗಾಗಲೇ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Next Story





