Qatar | ರಾಸ್ ಲಫಾನ್ LNG ಘಟಕದಲ್ಲಿ ಅಗ್ನಿ ದುರಂತ ಪ್ರಕರಣ : 8 ಭಾರತೀಯರ ಮೃತದೇಹ ಸ್ವದೇಶಕ್ಕೆ ರವಾನೆ

Photo |indiatoday
ದೋಹಾ: ಖತರ್ನ ರಾಸ್ ಲಫಾನ್ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ 8 ಭಾರತೀಯ ಪ್ರಜೆಗಳ ಮೃತದೇಹಗಳನ್ನು ಭಾರತಕ್ಕೆ ರವಾನಿಸಲಾಗಿದೆ.
ಲಫಾನ್ ಗ್ಯಾಸ್ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 13 ಜನರು ಪ್ರಾಣ ಕಳೆದುಕೊಂಡಿದ್ದು, 66 ಮಂದಿ ಗಾಯಗೊಂಡಿದ್ದರು.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಭಾರತೀಯ ರಾಯಭಾರ ಕಚೇರಿಯು, ಒಟ್ಟು 12 ಭಾರತೀಯ ಪ್ರಜೆಗಳ ಪೈಕಿ ನಾಲ್ವರ ಮೃತದೇಹಗಳನ್ನು ಜೂನ್ 25 ರಂದು ಸ್ವದೇಶಕ್ಕೆ ರವಾನಿಸಲಾಗಿತ್ತು. ಜೂನ್ 26 ರಂದು 8 ಮೃತದೇಹಗಳನ್ನು ಭಾರತಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಿದೆ.
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ತ್ವರಿತ ಸಹಕಾರ ನೀಡಿದ ಖತಾರ್ನ ಅಧಿಕಾರಿಗಳಿಗೆ, ಅನಿವಾಸಿ ಭಾರತೀಯ ಸಂಘಟನೆಗಳಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ.
ಭಾರತದ ರಾಯಭಾರಿ ಹಾಗೂ ರಾಯಭಾರಿ ಕಚೇರಿಯ ಅಧಿಕಾರಿಗಳು ಶುಕ್ರವಾರ ಘಟನೆಯಲ್ಲಿ ಗಾಯಗೊಂಡಿದ್ದ ಭಾರತೀಯರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
Next Story




