ಸಂಸತ್ ಸದಸ್ಯತ್ವ ಮರಳಿ ಪಡೆದ ನಂತರ ಇಂದು ಕೇರಳದ ವಯನಾಡ್ ಗೆ ರಾಹುಲ್ ಗಾಂಧಿ ಭೇಟಿ

Photo: PTI
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಕೇರಳದ ವಯನಾಡ್ ಗೆ ಶನಿವಾರದಿಂದ ಎರಡು ದಿನಗಳ ಭೇಟಿ ನೀಡಲಿದ್ದಾರೆ.
'ಮೋದಿ ಉಪನಾಮ' ಕುರಿತ ಮಾನನಷ್ಟ ಪ್ರಕರಣದಲ್ಲಿ ವಿಧಿಸಲಾಗಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಲೋಕಸಭೆಯಲ್ಲಿ ಸಂಸತ್ತಿನ ಸದಸ್ಯರಾಗಿ ಮರುಸೇರ್ಪಡೆಯಾದ ನಂತರ ರಾಹುಲ್ ವಯನಾಡ್ ಗೆ ಮೊದಲ ಭೇಟಿ ನೀಡುತ್ತಿದ್ದಾರೆ
ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಅದ್ಧೂರಿ ಸ್ವಾಗತವನ್ನು ಆಯೋಜಿಸಲಾಗಿದೆ ಎಂದು ಕೇರಳ ಕಾಂಗ್ರೆಸ್ ಪ್ರದೇಶ ಸಮಿತಿಯ ಕಾರ್ಯಾಧ್ಯಕ್ಷ ವಿ.ಟಿ. ಸಿದ್ದಿಕ್ ಅ ವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ರಾಹುಲ್ ಗಾಂಧಿಯವರಿಗೆ ವಯನಾಡಿನ ಇತಿಹಾಸದಲ್ಲೇ ಅತ್ಯಂತ ಆತ್ಮೀಯ ಸ್ವಾಗತವಿದೆ ಎಂದು ಸಿದ್ದಿಕ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮಂಗಳವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಭೇಟಿಯ ಕುರಿತು ಟ್ವೀಟ್ ಮಾಡಿ, “ಆಗಸ್ಟ್ 12-13 ರಂದು ರಾಹುಲ್ ಗಾಂಧಿ ಜೀ ತಮ್ಮ ಕ್ಷೇತ್ರ ವಯನಾಡಿನಲ್ಲಿ ಇರುತ್ತಾರೆ! ವಯನಾಡ್ನ ಜನರು ಪ್ರಜಾಪ್ರಭುತ್ವವನ್ನು ಗೆದ್ದಿದ್ದಾರೆ ಹಾಗೂ ತಮ್ಮ ಧ್ವನಿ ಸಂಸತ್ತಿಗೆ ಮರಳಿದೆ ಎಂದು ಸಂಭ್ರಮಿಸಿದ್ದಾರೆ! ರಾಹುಲ್ ಜಿ ಕೇವಲ ಸಂಸದರಲ್ಲ ಅವರ ಕುಟುಂಬದ ಸದಸ್ಯ! ಎಂದು ಬರೆದಿದ್ದಾರೆ.







