ದಿಲ್ಲಿಯಲ್ಲಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ಕೆಂಪು ಶರ್ಟ್, ಬ್ಯಾಡ್ಜ್ ಧರಿಸಿ ಸೂಟ್ ಕೇಸ್ ಹೊತ್ತ ಕಾಂಗ್ರೆಸ್ ನಾಯಕ
Photo: PTI
ಹೊಸದಿಲ್ಲಿ: ದಿಲ್ಲಿಯ ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದರು..
ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಹಮಾಲಿಗಳನ್ನು ಭೇಟಿ ಮಾಡುವಾಗ ಅವರು ಕೆಂಪು ಶರ್ಟ್ ಮತ್ತು ಬ್ಯಾಡ್ಜ್ ಧರಿಸಿದ್ದಲ್ಲದೆ, ಹೊರೆಯನ್ನೂ ಹೊತ್ತಿದ್ದರು.
ರಾಹುಲ್ ಗಾಂಧಿ ಅವರನ್ನು ನೂರಾರು ಹಮಾಲಿಗಳು ಸುತ್ತುವರಿದಿದ್ದು, ರಾಹುಲ್ ಅವರ ಈ ನಡೆಗೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು
Next Story