ಅತ್ಯಾಚಾರ ಅಪರಾಧಿ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ಗೆ ಮತ್ತೆ 30 ದಿನಗಳ ಪೆರೋಲ್

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ (PTI)
2017ರಿಂದ ಇಲ್ಲಿಯವರೆಗೆ 16 ಬಾರಿ ಪೆರೋಲ್ ಮಂಜೂರು
ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಸದ್ಯ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ 30 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪೆರೋಲ್ ಅವಧಿಯಲ್ಲಿ ಗುರ್ಮೀತ್ ಸಿಂಗ್ ಡೇರಾ ಸಚ್ಚಾ ಸೌದದ ಸಿರ್ಸಾ ಮುಖ್ಯ ಕಚೇರಿಯಲ್ಲಿ ಉಳಿಯಲಿದ್ದಾರೆ ಎಂದು ಡೇರಾ ಸಚ್ಚಾ ಸೌದದ ವಕ್ತಾರ ಹಾಗೂ ವಕೀಲ ಜಿತೇಂದರ್ ಖುರಾನಾ ಹೇಳಿದ್ದಾರೆ.
ತಮ್ಮ ಇಬ್ಬರು ಅನುಯಾಯಿ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ಸಿಂಗ್ ಅನ್ನು ಸದ್ಯ ಹರ್ಯಾಣದ ರೋಹ್ಟಕ್ ನಲ್ಲಿರುವ ಸುನರಾಯಿ ಕಾರಾಗೃಹದಲ್ಲಿರಿಸಲಾಗಿದೆ.
ಹಲವು ತಿಂಗಳ ಬಳಿಕ ಗುರ್ಮೀತ್ ಸಿಂಗ್ ಗೆ ಮಂಜೂರಾಗಿರುವ ಪೆರೋಲ್ ಇದಾಗಿದೆ. ಇದಕ್ಕೂ ಮುನ್ನ, ಗುರ್ಮೀತ್ ಸಿಂಗ್ ಗೆ ಜನವರಿಯಲ್ಲೂ ಪೆರೋಲ್ ಮಂಜೂರಾಗಿತ್ತು. 2017ರಿಂದ ಇಲ್ಲಿಯವರೆಗೆ ಗುರ್ಮೀತ್ ಸಿಂಗ್ ಗೆ 16 ಬಾರಿ ಪೆರೋಲ್ ಮಂಜೂರಾಗಿದೆ.
Next Story




