ರೆಪೊ ದರ ಇಳಿಸಿದ ಆರ್ಬಿಐ : ಸಾಲಗಳ ಮೇಲಿನ EMI ಅಗ್ಗ ಸಾಧ್ಯತೆ

ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (PTI)
ಹೊಸದಿಲ್ಲಿ : ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು 50 ಬೇಸಿಸ್ ಪಾಯಿಂಟ್ಗಳ ರೆಪೊ ದರ ಕಡಿತವನ್ನು ಘೋಷಿಸಿದ್ದಾರೆ. ಇದು ಸಾಲಗಾರರಿಗೆ ಶುಭ ಸುದ್ದಿಯಾಗಿದ್ದು, ಇಎಂಐ ಪಾವತಿಯಲ್ಲಿ ಕಡಿಮೆಯಾಗಲಿದೆ.
ಮುಂಬೈನಲ್ಲಿ ಮೂರು ದಿನಗಳ ಹಣಕಾಸು ನೀತಿ ಸಮಿತಿ (MPC) ಸಭೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ರೆಪೊ ದರ ಈಗ 6% ದಿಂದ 5.5%ಕ್ಕೆ ಇಳಿದಿದೆ. ಇದು ರೆಪೊ ದರದಲ್ಲಿ ಸತತ ಮೂರನೇ ಕಡಿತವಾಗಿದೆ. ರೆಪೊ ದರದಲ್ಲಿನ ಕಡಿತದಿಂದಾಗಿ, ಗೃಹ ಸಾಲಗಳು ಸೇರಿದಂತೆ ಎಲ್ಲಾ ಸಾಲಗಳು ಅಗ್ಗವಾಗಲಿದೆ.
Next Story





