ಬಿಹಾರ ಚುನಾವಣೆಯಲ್ಲಿ ಅಕ್ರಮ ಆರೋಪ : ವೀಡಿಯೊ ಹಂಚಿಕೊಂಡ ಆರ್ಜೆಡಿ

Screengrab:X/@RJDforIndia
ಹೊಸದಿಲ್ಲಿ : ಬಿಹಾರದಲ್ಲಿ ಮೊದಲ ಹಂತದ ಮತದಾನದ ವೇಳೆ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ವೀಡಿಯೊ ವೈರಲ್ ಆಗಿದೆ.
ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಈ ಕುರಿತು ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ವಿವಾದ ಭುಗಿಲೆದ್ದಿದೆ. ಮುಜಾಫರ್ಪುರದ ಸಾಹೇಬ್ಗಂಜ್ ಕ್ಷೇತ್ರದ ಬೂತ್ ಸಂಖ್ಯೆ 147ರಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಬಗ್ಗೆ ಮೂವರು ಮತದಾರರು ಆರೋಪಿಸಿದ್ದಾರೆ.
ವೈರಲ್ ಆಗಿರುವ ಮೊದಲ ವೀಡಿಯೊದಲ್ಲಿ, ಮತ ಚಲಾಯಿಸಲು ಬಂದಾಗ, ಮತಗಟ್ಟೆ ಅಧಿಕಾರಿಗಳು "ನಿಮ್ಮ ಮತ ಈಗಾಗಲೇ ಚಲಾಯಿಸಲಾಗಿದೆ" ಎಂದು ತಿಳಿಸಿದ್ದರು ಎಂದು ಓರ್ವ ವ್ಯಕ್ತಿ ಹೇಳಿಕೊಂಡಿದ್ದಾರೆ. ಅವರು ಮತ ಚಲಾಯಿಸಿಲ್ಲ ಎಂಬುದಕ್ಕೆ ಪುರಾವೆಯಾಗಿ ಶಾಯಿ ಹಾಕಿರದ ತನ್ನ ಬೆರಳುಗಳನ್ನು ವೀಡಿಯೊದಲ್ಲಿ ಪ್ರದರ್ಶಿಸಿದ್ದಾರೆ. ನಾವು ಮತ ಹಾಕದೇ ಇದ್ದಾಗ ನಮ್ಮ ಮತ ಹೇಗೆ ಹಾಕಲಾಗಿದೆ? ಎಂದು ಓರ್ವರು ಪ್ರಶ್ನಿಸಿದ್ದಾರೆ. ಅವರು ತಮ್ಮ ಬಳಿ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸರು ಮತಗಟ್ಟೆಯಿಂದ ಹೊರಹೋಗುವಂತೆ ನಮಗೆ ಸೂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆರ್ಜೆಡಿ ಭಾರತೀಯ ಚುನಾವಣಾ ಆಯೋಗಕ್ಕೆ ಈ ವೀಡಿಯೊವನ್ನು ಟ್ಯಾಗ್ ಮಾಡಿದೆ. "ಪ್ರಜಾಪ್ರಭುತ್ವದ ಅಣಕ" ಎಂದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇದಾದ ಬಳಿಕ ಅವರದ್ದೇ ಎರಡನೇ ವೀಡಿಯೊ ವೈರಲ್ ಆಗಿದೆ. ಅದರಲ್ಲಿ ನಮಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳುವುದು ಕಂಡು ಬಂದಿದೆ. ಶಾಯಿ ಹಾಕಿದ ಬೆರಳುಗಳನ್ನು ವೀಡಿಯೊದಲ್ಲಿ ಪ್ರದರ್ಶಿಸಿ ಯಶಸ್ವಿಯಾಗಿ ಮತ ಚಲಾಯಿಸಿದ್ದೇವೆ ಎಂದು ಹೇಳುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ಬಿಹಾರದ ಮುಖ್ಯ ಚುನಾವಣಾಧಿಕಾರಿ ಪ್ರತಿಕ್ರಿಯಿಸಿದ್ದು, ವಂಚನೆಯ ಆರೋಪಗಳನ್ನು ಸಂಪೂರ್ಣವಾಗಿ ಆಧಾರರಹಿತ ಎಂದು ಹೇಳಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆ ಮತ್ತು ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.
पहले किसने और क्यों इन्हें मतदान केंद्र से लौटाया, यह जाँच किया क्या @dm_muzaffarpur @CEOBihar @ECISVEEP ने?
— Rashtriya Janata Dal (@RJDforIndia) November 7, 2025
या केवल इनका वोट गिरवा कर मामले पर पर्दा डाल दिया गया? https://t.co/D5TsU6D95r







