ಬಿಹಾರ | ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಆರ್ಜೆಡಿ ಅಭ್ಯರ್ಥಿಯ ಬಂಧನ

Photo | timesofindia
ಪಾಟ್ನಾ : ಬಿಹಾರದ ಸಸಾರಾಮ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬೆನ್ನಲ್ಲೆ ಆರ್ಜೆಡಿ ಅಭ್ಯರ್ಥಿ ಸತೇಂದ್ರ ಸಾಹ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಸತೇಂದ್ರ ಸಾಹ್ ವಿರುದ್ಧ ಈ ಮೊದಲು ಜಾಮೀನು ರಹಿತ ವಾರಂಟ್(ಎನ್ಬಿಡಬ್ಲ್ಯೂ) ಜಾರಿಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸತೇಂದ್ರ ಅವರು ಸಸಾರಾಮ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಬಗ್ಗೆ ಮಾಹಿತಿ ತಿಳಿದು ಜಾರ್ಖಂಡ್ ಪೊಲೀಸರು ಬೀಡು ಬಿಟ್ಟಿದ್ದರು. ಸತೇಂದ್ರ ಸಾಹ್ ಅವರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಯಿತು. ಆದರೆ ಇದರ ಬೆನ್ನಲ್ಲೆ ಅವರನ್ನು ಬಂಧಿಸಲಾಯಿತು ಎಂದು ರೋಹ್ತಾಸ್ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2004ರಲ್ಲಿ ಜಾರ್ಖಂಡ್ನ ಗರ್ಹ್ವಾ ಜಿಲ್ಲೆಯ ಚಿರೌಂಜಿಯಾ ಮೋರ್ನಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸತೇಂದ್ರ ಪ್ರಮುಖ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
Next Story





