ಮಿಝೋರಾಂ ಚುನಾವಣಾ ಫಲಿತಾಂಶ: ಸ್ಪಷ್ಟ ಬಹುಮತದತ್ತ ಝಡ್ಪಿಎಂ

Photo: PTI
ಮಿಜೋರಾಂ: ಮಿಝೋರಾಂ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇನ್ನೇನು ಹೊರ ಬೀಳಲಿದ್ದು, ಆರಂಭಿಕ ಮತ ಎಣಿಕೆಯಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 26 ಕ್ಷೇತ್ರಗಳಳ್ಲಿ ಮುನ್ನಡೆ ಸಾಧಿಸಿದೆ.
40 ವಿಧಾನಸಭಾ ಸ್ಥಾನಗಳಿರುವ ಮಿಝೋರಾಂನಲ್ಲಿ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ZPM ಪಕ್ಷ ಬಹುಮತಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 2ರಲ್ಲಿ ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
ನವೆಂಬರ್ 7 ರಂದು ಮಿಝೋರಾಂ ವಿಧಾನಸಭಾ ಚುನಾವಣೆಯ ಮತದಾನ ನಡೆದಿದ್ದು, 80.66% ರಷ್ಟು ಮತದಾನವಾಗಿದೆ.
ಚುನಾವಣೋತ್ತರ ಸಮೀಕ್ಷೆಗಳು ಮಿಝೋರಾಂನಲ್ಲಿ ತೀವ್ರ ಪೈಪೋಟಿಯ ಸ್ಪರ್ಧೆ ಇರಬಹುದು ಎಂದು ಹೇಳಿತ್ತಾದರೂ, ಆಡಳಿತರೂಢ ಎಂಎನ್ಎಫ್ ಪಕ್ಷವನ್ನು ಝಡ್ಪಿಎಂ ಪಕ್ಷ ಸೋಲಿಸುವ ಸಾಧ್ಯತೆಗಳು ಕಾಣಿಸತೊಡಗಿವೆ.
Next Story





