ಡಾಲರ್ ಎದುರು 87.94 ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 44 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಅಂದರೆ 87.94ಕ್ಕೆ ತಲುಪಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ(ಎಂಪಿಸಿ) ಶುಕ್ರವಾರ ರೆಪೋ ದರವನ್ನು 6.25% ಕ್ಕೆ ಇಳಿಕೆ ಮಾಡಿದ ಬೆನ್ನಲ್ಲೇ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 87.50ಕ್ಕೆ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟದಿಂದ 9 ಪೈಸೆ ಚೇತರಿಸಿಕೊಂಡಿತ್ತು. ಇದೀಗ ಮತ್ತೆ ರೂಪಾಯಿ ಮೌಲ್ಯ 87.94 ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.
RBI ಐದು ವರ್ಷಗಳಲ್ಲಿ ಮೊದಲ ಬಾರಿಗೆ ರೆಪೋ ದರ ಕಡಿತಗೊಳಿಸಿತ್ತು. ಸಂಭಾವ್ಯ US ವ್ಯಾಪಾರ ಸುಂಕಗಳು ಹೆಚ್ಚಿನ ಪ್ರಾದೇಶಿಕ ಕರೆನ್ಸಿಗಳಲ್ಲಿ ನಷ್ಟವನ್ನು ಉಂಟುಮಾಡಿದೆ. ಆರ್ ಬಿಐ ದೇಶೀಯ ಕರೆನ್ಸಿಯನ್ನು ಬೆಂಬಲಿಸಲು ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ.
Next Story





