ಸಾಹಿತ್ಯ ಅಕಾಡೆಮಿ ಪುರಸ್ಕೃತ ಫಾರೂಕ್ ನಜ್ಕಿ ನಿಧನ

ಫಾರೂಕ್ ನಜ್ಕಿ / PHOTO:Twitter
ಶ್ರೀನಗರ: ಹಿರಿಯ ಪತ್ರಕರ್ತ, ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೀರ್ ಮುಹಮ್ಮದ್ ಫಾರೂಕ್ ನಜ್ಕಿ (83) ಅವರು ಮಂಗಳವಾರ ಕತ್ರಾದಲ್ಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಲ್ ಇಂಡಿಯಾ ರೇಡಿಯೊ ಕಾಶ್ಮೀರ ಮತ್ತು ದೂರದರ್ಶನದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ನಜ್ಕಿ ಫೆ.5ರಂದು ರಾತ್ರಿ ಹೃದಯಾಘಾತಕ್ಕೆ ತುತ್ತಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿದವು.
ನಜ್ಕಿ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನಜ್ಕಿ ಜಮ್ಮುವಿನಲ್ಲಿ ತನ್ನ ಪುತ್ರನೊಂದಿಗೆ ವಾಸವಾಗಿದ್ದರು.
1995ರಲ್ಲಿ ಕಾಶ್ಮೀರಿ ಕವನ ಸಂಕಲನ ‘ನಾರ್ ಹ್ಯುತನ್ ಕಂಝಾಲ್ ವಾನಸ್ (ಕಣ್ಣುರೆಪ್ಪೆಗಳಲ್ಲಿ ಬೆಂಕಿ)’ಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ನಜ್ಕಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ಅವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.
Next Story





