25 ವರ್ಷಗಳಿಂದ ತಾಯ್ನಾಡಿಗೆ ವಾಪಸ್ಸಾಗದೇ ಸೌದಿಯಲ್ಲಿದ್ದ ಕೇರಳದ ವ್ಯಕ್ತಿ ಮೃತ್ಯು

ಸೋಮ ಸುಂದರನ್ | PC : vknews.in
ಮುಂದಿನ ತಿಂಗಳು ಕೇರಳಕ್ಕೆ ಬರಲು ಸಿದ್ಧತೆ ನಡೆಸಿದ್ದ ಸೋಮ ಸುಂದರನ್!
ರಿಯಾದ್: ಮಲಪ್ಪುರಂ ಜಿಲ್ಲೆಯ ತಿರುರಂಗಡಿಯ ಕರಿಪರಂಬ ಮೂಲದ ಸೋಮ ಸುಂದರನ್ (65) ರಿಯಾದ್ ನ ಸುಲೈಯಿಲ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಸುಮಾರು 25 ವರ್ಷಗಳಿಂದ ತಾಯ್ನಾಡಿಗೆ ವಾಪಸ್ಸಾಗದ ಮೃತರು ಅವಿವಾಹಿತರಾಗಿದ್ದು, ವಿದೇಶದಲ್ಲಿಯೇ ತಮ್ಮ ಬದುಕಿನ ಬಹುಪಾಲು ಕಳೆದಿದ್ದರು.
ಮೃತರು ಮುಂದಿನ ತಿಂಗಳು ತಾಯ್ನಾಡಿಗೆ ವಾಪಸ್ಸಾಗಲು ಸಿದ್ಧತೆ ನಡೆಸುತ್ತಿದ್ದ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆಕಸ್ಮಿಕವಾಗಿ ಸಂಭವಿಸಿದ ಈ ಮರಣವು ಕುಟುಂಬ ಹಾಗೂ ಬಂಧುಗಳಿಗೆ ಆಘಾತವನ್ನುಂಟುಮಾಡಿದೆ.
ಮೃತದೇಹವನ್ನು ತಾಯ್ನಾಡಿಗೆ ಕಳುಹಿಸುವ ಸಂಬಂಧ ಅಗತ್ಯ ಔಪಚಾರಿಕ ಕಾರ್ಯಗಳನ್ನು ನಿರ್ವಹಿಸಲು ರಿಯಾದ್ ಕೆಎಂಸಿಸಿ ವಿಭಾಗದ ಅಧ್ಯಕ್ಷ ರಫೀಕ್ ಪುಲ್ಲೂರ್ ಅವರ ನೇತೃತ್ವದಲ್ಲಿ ಸ್ವಯಂಸೇವಕರು ಮುಂದಾಗಿದ್ದಾರೆ. ಮೃತರ ಆಪ್ತ ಸ್ನೇಹಿತ ಸೆಲೀಲ್ ಅವರೊಂದಿಗೆ ಸಹಕಾರ ನೀಡಿ, ಮೃತದೇಹವನ್ನು ತಾಯ್ನಾಡಿನತ್ತ ಸಾಗಿಸಲು ಎಲ್ಲಾ ವ್ಯವಸ್ಥೆಗಳು ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
Next Story





