ನಟಿ ದಿಶಾ ಪಟಾನಿ ನಿವಾಸದ ಬಳಿ ಗುಂಡಿನ ದಾಳಿ; ದಾಳಿಯ ಹೊಣೆ ಹೊತ್ತ ಗೋಲ್ಡಿ ಬ್ರಾರ್ ಗ್ಯಾಂಗ್

ನಟಿ ದಿಶಾ ಪಟಾನಿ
ಬರೇಲಿ: ಬರೇಲಿಯ ಸಿವಿಲ್ ಲೈನ್ಸ್ ನಲ್ಲಿರುವ ನಟಿ ದಿಶಾ ಪಟಾನಿಯ ನಿವಾಸದ ಮೇಲೆ ಮೋಟರ್ ಬೈಕ್ ನಲ್ಲಿ ಬಂದ ಇಬ್ಬರು ಶಂಕಿತ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಿಗೇ, ಗೋಲ್ಡಿ ಬ್ರಾರ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತಿದ್ದು, ಆಧ್ಯಾತ್ಮಿಕ ವ್ಯಕ್ತಿಗಳ ಬಗೆಗಿನ ಅಗೌರವಯುತ ನಡವಳಿಕೆ ಈ ದಾಳಿಗೆ ಕಾರಣ ಎಂದು ಹೇಳಿಕೊಂಡಿದೆ.
ದಾಳಿಯ ವೇಳೆ ನಟಿ ದಿಶಾ ಪಟಾನಿಯ ಕುಟುಂಬದ ಸದಸ್ಯರು ಮನೆಯಲ್ಲಿದ್ದರು ಎನ್ನಲಾಗಿದೆ. ಈ ಗುಂಡಿಯ ದಾಳಿಯಲ್ಲಿ ಯಾರಿಗೂ ಗಾಯಗಳಾದ ವರದಿಯಾಗಿಲ್ಲ. ಈ ದಾಳಿ ನಡೆದಾಗ ದಿಶಾ ಪಟಾನಿ ಮುಂಬೈನಲ್ಲಿದ್ದರು ಎಂದು ವರದಿಯಾಗಿದೆ.
"ಈ ಸಂಬಂಧ ದೂರನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯು ತ್ವರಿತ ಗತಿಯಲ್ಲಿ ಪ್ರಗತಿಯಲ್ಲಿದೆ. ದಿಶಾ ಪಟಾನಿಯ ಕುಟುಂಬದ ಸದಸ್ಯರಿಗೆ ಪೂರ್ಣಪ್ರಮಾಣದ ರಕ್ಷಣೆ ಒದಗಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
Next Story





