ಬಾಹ್ಯಾಕಾಶದತ್ತ ಪ್ರಯಾಣ: ಮೊದಲ ಸಂದೇಶ ರವಾನಿಸಿದ ಶುಭಾಂಶು ಶುಕ್ಲಾ
"ನನ್ನ ಹೆಗಲ ಮೇಲೆ ಭಾರತೀಯ ತ್ರಿವರ್ಣ ಧ್ವಜವಿದೆ"

ಶುಭಾಂಶು ಶುಕ್ಲಾ (File Photo: PTI)
ಹೊಸದಿಲ್ಲಿ : ಆಕ್ಸಿಯಮ್ 4 ಮಿಷನ್(Axiom-4 mission) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾದ 10 ನಿಮಿಷಗಳಲ್ಲಿ ನಾವು ಬಾಹ್ಯಾಕಾಶ ತಲುಪಿದ್ದೇವೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸಂದೇಶವನ್ನು ಕಳುಹಿಸಿದ್ದಾರೆ.
ʼʼನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ, ಇದೊಂದು ರೋಮಾಂಚನಕಾರಿ ಪ್ರಯಾಣ. 41 ವರ್ಷಗಳ ನಂತರ ನಾವು ಬಾಹ್ಯಾಕಾಶ ತಲುಪಿದ್ದೇವೆ." ಎಂದು ಶುಭಾಂಶು ಶುಕ್ಲಾ ಬಾಹ್ಯಾಕಾಶ ಹಾರಾಟದ 10 ನಿಮಿಷಗಳ ಬಳಿಕ ಸಂದೇಶವನ್ನು ಕಳುಹಿಸಿದ್ದಾರೆ.
ನಾವು ಸೆಕೆಂಡಿಗೆ 7.5 ಕಿ.ಮೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದ್ದೇವೆ, ನನ್ನ ಹೆಗಲ ಮೇಲೆ ಅಚ್ಚೊತ್ತಿರುವ ಭಾರತೀಯ ತ್ರಿವರ್ಣ ಧ್ವಜ ನಾನು ನಿಮ್ಮೆಲ್ಲರೊಂದಿಗೇ ಇದ್ದೇನೆ ಎಂದು ನೆನಪಿಸುತ್ತಿದೆ. ಇದು ಕೇವಲ ಅಂತರ್ ರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣವಲ್ಲ, ಇದು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಪ್ರಯಾಣ. ನೀವೆಲ್ಲರೂ ಈ ಪ್ರಯಾಣದ ಭಾಗವಾಗಿರಬೇಕು ಎಂದು ನಾನು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.





