ದಿಲ್ಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ಪಕ್ಕದಲ್ಲೇ ಹೊತ್ತಿ ಉರಿದ ಬಸ್

Photo Credit : PTI
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಏರ್ ಇಂಡಿಯಾ ವಿಮಾನದಿಂದ ಕೆಲವೇ ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ವೊಂದು ಹೊತ್ತಿ ಉರಿದಿದೆ.
ಮಂಗಳವಾರ ಮಧ್ಯಾಹ್ನ SATS ಏರ್ಪೋರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನಿಂದ ನಿರ್ವಹಿಸಲ್ಪಡುವ ಬಸ್ ಬೇ 32ರ ಬಳಿ ನಿಂತಿದ್ದಾಗ ಧಗಧಗನೆ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆ ವಿಮಾನಕ್ಕೆ ತಾಗಿದ್ದರೆ ಹೆಚ್ಚಿನ ಸಮಸ್ಯೆಯಾಗುತ್ತಿತ್ತು. ಆದರೆ ಸ್ವಲ್ಪದರಲ್ಲೇ ಸಂಭಾವ್ಯ ದುರಂತ ತಪ್ಪಿದೆ.
ಈ ಕುರಿತ ವೈರಲ್ ವೀಡಿಯೊದಲ್ಲಿ ಬಸ್ ಬೆಂಕಿಗಾಹುತಿಯಾಗುತ್ತಿರುವುದು ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಬಸ್ಸಿನ ಹೆಚ್ಚಿನ ಭಾಗ ಬೆಂಕಿಗಾಹುತಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.
PHOTO | An Air India SATS bus caught fire near a parked aircraft at Delhi Airport’s Terminal 3. No passengers were on board at the time of the incident. The airport’s fire squad quickly responded and brought the blaze under control before it could spread.
— Press Trust of India (@PTI_News) October 28, 2025
(Source: Third Party) pic.twitter.com/ULmjaT9eGM







