ಇಳಿದ ಚಿನ್ನ-ಬೆಳ್ಳಿ ಬೆಲೆ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI Generated)
ಕಳೆದೆರಡು ದಿನಗಳಲ್ಲಿ ಚಿನ್ನದ ದರದಲ್ಲಿ ಶೇ. 3ರಷ್ಟು ಇಳಿಕೆ ಕಂಡಿದೆ.
ಫೆಬ್ರವರಿಯ ನಂತರ ಚಿನ್ನದ ದರ ಇಳಿಕೆಯ ಹಾದಿಯಲ್ಲಿದೆ. ಸೆಪ್ಟೆಂಬರ್ನಲ್ಲಿ ಅಲ್ಪ ಮಟ್ಟಿನ ಏರಿಳಿತಗಳ ಬೆಲೆ ಸ್ಥಿರವಾಗಿತ್ತು. ಆದರೆ, ಅಕ್ಟೋಬರ್ ತಿಂಗಳಿಡೀ ಕುಸಿತದ ಜೊತೆಗೆ ಸಾಗಿದ್ದ ಚಿನ್ನ-ಬೆಳ್ಳಿಯ ದರದಲ್ಲಿ, ಕೊನೆಯ ವಾರದಲ್ಲಿ ಸ್ವಲ್ಪ ಸ್ಥಿರತೆ ಕಂಡುಬಂದಿತ್ತು. ನವೆಂಬರ್ 2 ಸೋಮವಾರದಿಂದ ಮತ್ತೆ ಏರಿಕೆಯತ್ತ ಸಾಗಿತ್ತು. ಆದರೆ ಕಳೆದ ಶುಕ್ರವಾರ ಮತ್ತೆ ತೀವ್ರ ಕುಸಿತ ದಾಖಲಿಸಿತ್ತು. ಶನಿವಾರದಿಂದ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇದೀಗ ಮಂಗಳವಾರದ ನಂತರ ಮತ್ತೆ ಕುಸಿತದತ್ತ ಸಾಗುತ್ತಿದೆ.
ಅಮೆರಿಕದ ಹಣದುಬ್ಬರದ ದತ್ತಾಂಶವು ನಿರೀಕ್ಷೆಗಿಂತ ಹೆಚ್ಚಾಗಿರುವುದು ಅಲ್ಲಿನ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ನ ಬಡ್ಡಿದರದ ಮುನ್ನೋಟ ಮತ್ತು ಜಾಗತಿಕ ಮಾರುಕಟ್ಟೆಗಳ ಏರಿಳಿತಗಳ ಪ್ರಭಾವವನ್ನು ಹೂಡಿಕೆದಾರರು ವಿಶ್ಲೇಷಿಸುತ್ತಿರುವುದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕೃತವಾಗಿದೆ. ಹೀಗಾಗಿ ಕಳೆದೆರಡು ದಿನಗಳಲ್ಲಿ ಚಿನ್ನದ ದರದಲ್ಲಿ ಶೇ.3ರಷ್ಟು ಇಳಿಕೆ ಕಂಡಿದೆ.
ಚಿನ್ನದ ದರದಲ್ಲಿ ಮತ್ತೆ ಇಳಿಕೆ
ನವೆಂಬರ್ 11ರಂದು ಬುಧವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 71 ರೂ. ಇಳಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,41,980 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 65 ರೂ. ಕುಸಿದಿದ್ದು, ಹತ್ತು ಗ್ರಾಂಗೆ 1,30,150 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 53 ರೂ. ಕಡಿಮೆಯಾಗಿ, ಹತ್ತು ಗ್ರಾಂಗೆ 1,06,490 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ನವೆಂಬರ್ 11ರಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,198 (-71) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,015 (-65) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,649 (-53) ರೂ. ಬೆಲೆಗೆ ಬಂದು ನಿಂತಿದೆ.
ಬೆಳ್ಳಿಯ ದರದಲ್ಲೂ ಇಳಿಕೆ
ಜನವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಬೆಳ್ಳಿಯ ಬೆಲೆ ನಂತರ ಕುಸಿತದ ಹಾದಿಯಲ್ಲಿತ್ತು. ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000ರೂ.ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ನಿಂತಿತ್ತು.
ಸೆಪ್ಟೆಂಬರ್ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ಸ್ಥಿರವಾಗಿತ್ತು. ನಂತರ ಅಕ್ಟೋಬರ್ ತಿಂಗಳಲ್ಲಿ ಕುಸಿದ ಬೆಳ್ಳಿಯ ದರ ಅಕ್ಟೋಬರ್ 15ರಂದು ಪ್ರತಿ ಗ್ರಾಂಗೆ 5 ರೂ ಇಳಿದು ಮತ್ತೆ ಪ್ರತಿ ಕೆಜಿಗೆ 2,30,000ರೂ.ಗೆ ತಲುಪಿ ಸ್ಥಿರವಾಗಿತ್ತು.
ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 2,00,000ರೂ.ಗೆ ತಲುಪಿತ್ತು. ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿತ್ತು. ನಂತರ ನವೆಂಬರ್ ಅರಂಭದಲ್ಲಿ ಪ್ರತಿ ಗ್ರಾಂಗೆ 10 ರೂ ಏರಿಕೆಯಾಗಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 2,10,000ರೂ.ಗೆ ತಲುಪಿತ್ತು. ಕಳೆದ ಶುಕ್ರವಾರ ನವೆಂಬರ್ 6ರಂದು ಪ್ರತಿ ಗ್ರಾಂಗೆ 5 ರೂ ಇಳಿದಿರುವ ಬೆಳ್ಳಿಯ ದರ ಪ್ರತಿ ಕೆಜಿಗೆ 2,05,000 ರೂ.ಗೆ ತಲುಪಿದೆ. ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿತ್ತು. ಇದೀಗ ಬುಧವಾರ ನವೆಂಬರ್ 11ರಂದು ಮತ್ತೆ ಪ್ರತಿ ಗ್ರಾಂಗೆ 5 ರೂ ಇಳಿದಿರುವ ಬೆಳ್ಳಿಯ ದರ ಮತ್ತೆ ಪ್ರತಿ ಕೆಜಿಗೆ 2,00,000 ರೂ.ಗೆ ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,213 (-71) ರೂ., 22 ಕ್ಯಾರೆಟ್ ಚಿನ್ನದ ದರ 13,030 (-65) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,198 (-71) ರೂ., 22 ಕ್ಯಾರೆಟ್ ಚಿನ್ನದ ದರ 13,015 (-65) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,203 (-71) ರೂ., 22 ಕ್ಯಾರೆಟ್ ಚಿನ್ನದ ದರ 13,030 (-65) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,198 (-213) ರೂ., 22 ಕ್ಯಾರೆಟ್ ಚಿನ್ನದ ದರ 13,015 (-195) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,198 (-71) ರೂ., 22 ಕ್ಯಾರೆಟ್ ಚಿನ್ನದ ದರ 13,015 (-65) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,198 (-71) ರೂ., 22 ಕ್ಯಾರೆಟ್ ಚಿನ್ನದ ದರ 13,015 (-65) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,213 (-71) ರೂ., 22 ಕ್ಯಾರೆಟ್ ಚಿನ್ನದ ದರ 13,030 (-65) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,213 (-71) ರೂ., 22 ಕ್ಯಾರೆಟ್ ಚಿನ್ನದ ದರ 13,030 (-65) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,213 (-71) ರೂ., 22 ಕ್ಯಾರೆಟ್ ಚಿನ್ನದ ದರ 13,030 (-65) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,198 (-71) ರೂ., 22 ಕ್ಯಾರೆಟ್ ಚಿನ್ನದ ದರ 13,015 (-65) ರೂ.






