ಚಿನ್ನದ ಬೆಲೆ ಅಲ್ಪ ಏರಿಕೆ: ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI Generated)
ಹಣದುಬ್ಬರದ ನಿರಂತರ ಅಪಾಯಗಳು ಬಡ್ಡಿದರ ಕಡಿತದ ಅವಕಾಶವನ್ನು ಮಿತಗೊಳಿಸುತ್ತದೆ. ಇದರಿಂದ ಬಾಂಡ್ ಇಳುವರಿ ಮತ್ತು ಡಾಲರ್ ಅನ್ನು ಉನ್ನತಮಟ್ಟದಲ್ಲಿದ್ದು, ಅಮೂಲ್ಯ ಲೋಹಗಳ ಬೆಲೆಗಳು ಕುಸಿಯಬಹುದು.
ಚಿನ್ನ-ಬೆಳ್ಳಿಯ ಬೆಲೆ ಸೆಪ್ಟೆಂಬರ್ನಲ್ಲಿ ಅಲ್ಪ ಮಟ್ಟಿನ ಏರಿಳಿತಗಳ ನಂತರ ಸ್ಥಿರವಾಗಿತ್ತು. ಆದರೆ, ಅಕ್ಟೋಬರ್ ಮೊದಲ ಮೂರು ವಾರವಿಡೀ ಕುಸಿತದ ಜೊತೆಗೆ ಸಾಗಿದ್ದ ಮಾರುಕಟ್ಟೆ, ಕಳೆದ ವಾರವಿಡೀ ಮತ್ತೆ ಕುಸಿತ ದಾಖಲಿಸಿರುವುದು ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿ ಮಾಡುವವರ ಮೊಗದಲ್ಲಿ ಸಂತಸ ತಂದಿತ್ತು. ನಂತರ ಕಳೆದ ಗುರುವಾರ ಮತ್ತು ಶುಕ್ರವಾರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಕುಸಿತ ದಾಖಲಿಸಿದೆ. ಶನಿವಾರದ ನಂತರ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತೊಂದು ನಿರ್ಣಾಯಕ ವಾರವನ್ನು ಎದುರಿಸುತ್ತಿದೆ. ಈಗಾಗಲೇ ದೇಶೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ (MCX) ತೀವ್ರ ಕುಸಿತ ಕಂಡುಬಂದಿದೆ. ಕಳೆದ ವಾರದಲ್ಲಿ ಚಿನ್ನವು ಸುಮಾರು ಶೇ 4ರಷ್ಟು ಮತ್ತು ಬೆಳ್ಳಿಯು ಶೇ 7ಕ್ಕಿಂತ ಹೆಚ್ಚು ಕುಸಿದಿದೆ.
ಏರುತ್ತಿರುವ ತೈಲ ಬೆಲೆಗಳು ಮತ್ತು ಅಮೆರಿಕದ ಫೆಡರಲ್ ರಿಸರ್ವ್ನ ಮುಂಬರುವ ನೀತಿ ನಿರ್ಧಾರವು ಚಿನ್ನ-ಬೆಳ್ಳಿ ಬೆಲೆಗಳ ಸಮೀಪದ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ. ಹಣದುಬ್ಬರದ ನಿರಂತರ ಅಪಾಯಗಳು ಬಡ್ಡಿದರ ಕಡಿತದ ಅವಕಾಶವನ್ನು ಮಿತಗೊಳಿಸಬಹುದು. ಇದು ಬಾಂಡ್ ಇಳುವರಿ ಮತ್ತು ಡಾಲರ್ ಅನ್ನು ಉನ್ನತಮಟ್ಟದಲ್ಲಿಟ್ಟು ಅಮೂಲ್ಯ ಲೋಹಗಳ ಬೆಲೆಗಳ ಮೇಲೆ ಹೆಚ್ಚಿನ ಒತ್ತಡ ಹೇರಬಹುದು.
ಚಿನ್ನದ ದರದಲ್ಲಿ ಸ್ವಲ್ಪ ಏರಿಕೆ
ಅಕ್ಟೋಬರ್ 27ರಂದು ಮಂಗಳವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಸೋಮವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 54ರೂ. ಏರಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,43,290ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 50ರೂ. ಏರಿದ್ದು, ಹತ್ತು ಗ್ರಾಂಗೆ 1,31,350ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 51ರೂ. ಹೆಚ್ಚಾಗಿ, ಹತ್ತು ಗ್ರಾಂಗೆ 1,07,570ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಅಕ್ಟೋಬರ್ 27ರಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,329 (+54) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,135 (+50) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,757 (+51) ರೂ. ಬೆಲೆಗೆ ಬಂದು ನಿಂತಿದೆ.
ಸ್ಥಿರವಾದ ಬೆಳ್ಳಿಯ ದರ
ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000ರೂ. ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ನಿಂತಿತ್ತು.
ಸೆಪ್ಟೆಂಬರ್ ನಂತರದ ವಾರಗಳಲ್ಲಿ ಸ್ವಲ್ಪ ಏರಿಳಿತ ಕಂಡರೂ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ಸ್ಥಿರವಾಗಿತ್ತು. ಅಕ್ಟೋಬರ್ 1ರಂದು ಗುರುವಾರ ಪ್ರತಿ ಗ್ರಾಂ ಬೆಳ್ಳಿ ದರ 5ರೂ. ಇಳಿದು ಪ್ರತಿ ಕೆಜಿಗೆ ಮತ್ತೆ 2,35,000ರೂ.ಗೆ ಬಂದು ತಲುಪಿದೆ. ಅಂದಿನಿಂದ ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ನಂತರ ಅಕ್ಟೋಬರ್ 15ರಂದು ಪ್ರತಿ ಗ್ರಾಂಗೆ 5ರೂ ಇಳಿದು ಮತ್ತೆ ಪ್ರತಿ ಕೆಜಿಗೆ 2,30,000ರೂ.ಗೆ ತಲುಪಿತ್ತು.
ಅಕ್ಟೋಬರ್ 22ರಂದು ಗುರುವಾರ ಪ್ರತಿ ಗ್ರಾಂಗೆ 5ರೂ ಇಳಿದು ಪ್ರತಿ ಕೆಜಿಗೆ 2,25,000ರೂ.ಗೆ ತಲುಪಿತ್ತು. ಅದರ ಮರುದಿನ ಶುಕ್ರವಾರ ಪ್ರತಿ ಗ್ರಾಂಗೆ 5ರೂ ಇಳಿದು ಪ್ರತಿ ಕೆಜಿಗೆ 2,20,000ರೂ.ಗೆ ತಲುಪಿದ್ದು, ಅಂದಿನಿಂದ ಅದೇ ಬೆಲೆಗೆ ಸ್ಥಿರವಾಗಿದೆ.
ಒಟ್ಟಿನಲ್ಲಿ, ಕಳೆದ ವಾರದಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ 7ರಷ್ಟು ಕುಸಿತವಾಗಿದೆ. ಹೆಚ್ಚಿನ ಬೆಲೆಯಿಂದಾಗಿ ಉದ್ಯಮಗಳು ಬೆಳ್ಳಿಯ ಬಳಕೆ ಕಡಿಮೆ ಮಾಡಿ ಪರ್ಯಾಯ ಮಾರ್ಗ ಹುಡುಕಬಹುದು ಎನ್ನುವ ಆತಂಕವೇ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 14,344 (+54) ರೂ., 22 ಕ್ಯಾರೆಟ್ ಚಿನ್ನದ ದರ 13,150 (+50) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 14,329 (+54) ರೂ., 22 ಕ್ಯಾರೆಟ್ ಚಿನ್ನದ ದರ 13,135 (+50) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 14,334 (+54) ರೂ., 22 ಕ್ಯಾರೆಟ್ ಚಿನ್ನದ ದರ 13,140 (+50) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 14,329 (+54) ರೂ., 22 ಕ್ಯಾರೆಟ್ ಚಿನ್ನದ ದರ 13,135 (+50) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 14,329 (+54) ರೂ., 22 ಕ್ಯಾರೆಟ್ ಚಿನ್ನದ ದರ 13,135 (+50) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 14,329 (+54) ರೂ., 22 ಕ್ಯಾರೆಟ್ ಚಿನ್ನದ ದರ 13,135 (+50) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 14,344 (+54) ರೂ., 22 ಕ್ಯಾರೆಟ್ ಚಿನ್ನದ ದರ 13,150 (+50) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 14,344 (+54) ರೂ., 22 ಕ್ಯಾರೆಟ್ ಚಿನ್ನದ ದರ 13,150 (+50) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 14,344 (+54) ರೂ., 22 ಕ್ಯಾರೆಟ್ ಚಿನ್ನದ ದರ 13,150 (+50) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 14,329 (+54) ರೂ., 22 ಕ್ಯಾರೆಟ್ ಚಿನ್ನದ ದರ 13,135 (+50) ರೂ.






