ಪಕ್ಷಾಂತರ ವಿರೋಧಿ ಕಾಯ್ದೆಯ ಪರಿಶೀಲನಾ ಸಮಿತಿಗೆ ಸ್ಪೀಕರ್ ಯು.ಟಿ. ಖಾದರ್ ನೇಮಕ

ಮುಂಬೈ, ಫೆ.9: ಪಕ್ಷಾಂತರ ವಿರೋಧಿ ಕಾಯ್ದೆಗೆ ಸಂಬಂಧಿಸಿದಂತೆ ಸಂವಿಧಾನದ 10ನೆ ಅನುಸೂಚಿಯಡಿ ರಚಿಸಲಾದ ನಾಲ್ಕು ಮಂದಿ ಸ್ಪೀಕರ್‌ಗಳ ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ನೇಮಕ ಮಾಡಲಾಗಿದೆ.
ಮಹಾರಾಷ್ಟ್ರ ವಿಧಾನ ಸಭೆಯ ಸ್ಪೀಕರ್ ರಾಹುಲ್ ನಾಗ್ವೇಕರ್ ಅಧ್ಯಕ್ಷತೆಯ ಈ ಉನ್ನತ ಮಟ್ಟದ ಅಧಿಕಾರ ಸಮಿತಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಲ್ಲದೆ ಒರಿಸ್ಸಾ ಮತ್ತು ನಾಗಲ್ಯಾಂಡ್ ಸ್ಪೀಕರ್ ಕೂಡಾ ಇದ್ದಾರೆ.
ಮಹಾರಾಷ್ಟ್ರದ ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಸೋಮವಾರ ಈ ಸಮಿತಿಯ ಸಭೆಯು ನಡೆಯಿತು. ಸ್ಪೀಕರ್ ಯು.ಟಿ. ಖಾದರ್ ಚರ್ಚೆಯಲ್ಲಿ ಪಾಲ್ಗೊಂಡರು.
Next Story





