ಇಸ್ರೋದಿಂದ ಆದಿತ್ಯ-ಎಲ್ 1 ಉಪಗ್ರಹ ಉಡಾವಣೆ

Photo: ANI
ಹೊಸದಿಲ್ಲಿ: ಚಂದ್ರಯಾನ-3ರ ಯಶಸ್ಸಿನ ಸಂಭ್ರಮದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಇದೀಗ ಸೂರ್ಯನತ್ತ ದೃಷ್ಟಿ ನೆಟ್ಟಿದೆ. ಬಾಹ್ಯಾಕಾಶ ಸಂಸ್ಥೆಯು ತನ್ನ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ದೇಶದ ಪ್ರಮುಖ ಬಾಹ್ಯಾಕಾಶ ನಿಲ್ದಾಣದಿಂದ ಶನಿವಾರ ಬೆಳಿಗ್ಗೆ 11:50 ಕ್ಕೆ ಉಡಾವಣೆ ಮಾಡಿದೆ.
ಆದಿತ್ಯ ಎಲ್ -1 ನೌಕೆಯನ್ನು ಹೊತ್ತ ಪಿಎಸ್ ಎಲ್ ವಿ-ಸಿ 57 ರಾಕೆಟ್ ನಭಕ್ಕೆ ಜಿಗಿದಿದೆ.
ಆದಿತ್ಯ ಎಲ್-1 ಯೋಜನೆ ಮೂಲಕ ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸಿದ 4ನೇ ರಾಷ್ಟ್ರ ಭಾರತ.
ಇಸ್ರೋ ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದ ಲಾಂಗ್ರೇಜ್ ಪಾಯಿಂಟ್ ಗೆ ತಲುಪಿ ಸೂರ್ಯನ ಅಧ್ಯಯನ ನಡೆಸಲಿದೆ.
Next Story





