ಸತತ ಕುಸಿತದ ನಂತರ ದಿಢೀರ್ ಏರಿದ ಚಿನ್ನ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಸೋಮವಾರದಿಂದ ಕುಸಿತದ ಹಾದಿಯಲ್ಲಿದ್ದ ಚಿನ್ನ ಶನಿವಾರ್ ಹಠಾತ್ ಏರಿಕೆ ಕಂಡಿದೆ.
ಫೆಬ್ರವರಿ ತಿಂಗಳಲ್ಲಿ ಸ್ಥಿರವಾಗಿದ್ದ ಚಿನ್ನ ಕಳೆದ ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಆದರೆ, ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು, ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ಚಿನ್ನ-ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದ ನಂತರ ಗುರುವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಶುಕ್ರವಾರವೂ ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಕುಸಿತ ಕಂಡುಬಂದಿದೆ. ಆದರೆ ಶನಿವಾರ ಇದೀಗ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡಿದೆ.
ಜಾಗತಿಕ ಹಣಕಾಸು ಸ್ಥಿರತೆಯಲ್ಲಿ ಅಮೆರಿಕದ ವ್ಯವಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಭೌಗೋಳಿಕ- ರಾಜಕೀಯದ ಉದ್ವಿಗ್ನತೆಯ ಸ್ಥಿತಿಯಲ್ಲಿ ಮತ್ತು ಡಾಲರ್ ದುರ್ಬಲವಾದಾಗ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಅಮೂಲ್ಯ ಲೋಹಗಳ ಕಡೆಗೆ ಗಮನಹರಿಸುತ್ತಾರೆ. ಹೀಗಾಗಿ ಚಿನ್ನದ ಬೆಲೆ ಜಾಗತಿಕವಾಗಿ ಏರಿಳಿತ ಕಾಣುತ್ತಲೇ ಇದೆ.
ಇಂದಿನ ಚಿನ್ನದ ದರ ಹೇಗಿದೆ?
ಮಾರ್ಚ್ 07ರಂದು ಶನಿವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಶುಕ್ರವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 251 ರೂ. ಏರಿಕೆಯಾಗಿ ಹತ್ತು ಗ್ರಾಂ ಬೆಲೆ 1,63,640 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 230 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,50,000 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 188 ರೂ. ಏರಿಕೆ ಕಂಡು ಹತ್ತು ಗ್ರಾಂಗೆ 1,22,730 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮಾರ್ಚ್ 07ರಂದು ಶನಿವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,364 (+251) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,000 (+230) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,273 (+188) ರೂ. ಬೆಲೆಗೆ ತಲುಪಿದೆ.
ಸ್ಥಿರವಾದ ಬೆಳ್ಳಿ ದರ
ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ಭಾನುವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಈ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು.
ನಂತರ ಮಾರ್ಚ್ 03ರಂದು ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ. ಇದೀಗ ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳ್ಳಿ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ ₹16,380 (+252) ರೂ., 22 ಕ್ಯಾರೆಟ್ ಚಿನ್ನದ ದರ 15,015 (+230) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ ₹16,364 (+251) ರೂ., 22 ಕ್ಯಾರೆಟ್ ಚಿನ್ನದ ದರ 15,000 (+230) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ ₹16,370 (+252) ರೂ., 22 ಕ್ಯಾರೆಟ್ ಚಿನ್ನದ ದರ 15,005 (+230) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,418 (+98) ರೂ., 22 ಕ್ಯಾರೆಟ್ ಚಿನ್ನದ ದರ 15,050 (+90) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ ₹16,364 (+251) ರೂ., 22 ಕ್ಯಾರೆಟ್ ಚಿನ್ನದ ದರ 15,000 (+230) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ ₹16,364 (+251) ರೂ., 22 ಕ್ಯಾರೆಟ್ ಚಿನ್ನದ ದರ 15,000 (+230) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ ₹16,380 (+252) ರೂ., 22 ಕ್ಯಾರೆಟ್ ಚಿನ್ನದ ದರ 15,015 (+230) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ ₹16,380 (+252) ರೂ., 22 ಕ್ಯಾರೆಟ್ ಚಿನ್ನದ ದರ 15,015 (+230) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ ₹16,380 (+252) ರೂ., 22 ಕ್ಯಾರೆಟ್ ಚಿನ್ನದ ದರ 15,015 (+230) ರೂ.







