ಮಹಾರಾಷ್ಟ್ರ ಮಾಜಿ ಸಚಿವ ನವಾಬ್ ಮಲಿಕ್ಗೆ ಜಾಮೀನು ಮಂಜೂರು

ನವಾಬ್ ಮಲಿಕ್
ಹೊಸದಿಲ್ಲಿ: ವೈದ್ಯಕೀಯ ಕಾರಣಗಳಿಗಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನವಾಬ್ ಮಲಿಕ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿರುವ ಸುಪ್ರೀಂಕೋರ್ಟ್ “ವೈದ್ಯಕೀಯ ಪರಿಸ್ಥಿತಿಗಳ ಮೇಲೆ ಜಾಮೀನು ನೀಡಿ ಆದೇಶಿಸಿದ್ದೇವೆ” ಎಂದು ಹೇಳಿದೆ.
ನವಾಬ್ ಮಲಿಕ್ ಅವರ ಒಂದು ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಅವರು ಮೂತ್ರಪಿಂಡ ಕಾಯಿಲೆಗಳಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಮಲಿಕ್ ಪರ ಹಾಜರಾದ ಕಪಿಲ್ ಸಿಬಲ್ ವಾದಿಸಿದ್ದು, ʼನಿಗದಿತ ಅವಧಿಗೆ ವೈದ್ಯಕೀಯ ಆಧಾರದ ಮೇಲೆ ನೀಡಲಾದ ಜಾಮೀನಿಗೆ ನಮ್ಮ ಆಕ್ಷೇಪವಿಲ್ಲʼ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ವಾದ ಆಲಿಸಿದ ಸುಪ್ರೀಂ ಕೋರ್ಟ್ ನವಾಬ್ ಮಲಿಕ್ಗೆ ಎರಡು ತಿಂಗಳ ಅವಧಿಗೆ ಜಾಮೀನು ನೀಡಿದೆ.
Next Story





