CBSEಯ ತ್ರಿಭಾಷಾ ನೀತಿ ಜಾರಿ | ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಜೂ. 18: 2026-27 ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್ಇಯ ತ್ರಿಭಾಷಾ ನೀತಿಯನ್ನು ಜಾರಿಗೊಳಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ‘‘ಮಧ್ಯಂತರ ತಡೆಯ ಪ್ರಶ್ನೆಯೇ ಇಲ್ಲ’’ ಎಂದು ಗುರುವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠ, ‘ಫ್ರೆಂಡ್ಸ್ ಆಫ್ ಪೀಪಲ್ ಫಾರ್ ಆ್ಯಕ್ಟಿವ್ ಡೆಮಾಕ್ರೆಸಿ’ ಎಂಬ ಎನ್ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು.
ಪೀಠ ಈ ಅರ್ಜಿಯನ್ನು ವಿಚಾರಣೆಗೆ ಬಾಕಿ ಇರುವ ಇದೇ ವಿಷಯಕ್ಕೆ ಸಂಬಂಧಿದ ಅರ್ಜಿಗಳೊಂದಿಗೆ ಸೇರಿಸಿತು.
‘‘ನಾವು ಇಂದು ಒಂದೇ ಸಾಲಿನ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಈ ವಿಷಯದ ಕುರಿತು ಸುದೀರ್ಘವಾಗಿ ವಾದ ಮಂಡಿಸಲಾಗಿದೆ. ಮಧ್ಯಂತರ ತಡೆಯ ಪ್ರಶ್ನೆಯೇ ಇಲ್ಲ’’ ಎಂದು ಪೀಠ ಹೇಳಿತು.
Next Story




