ಲೋಕಸಭೆಯಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತು ರದ್ದು

Photo:PTI
ಹೊಸದಿಲ್ಲಿ: ಲೋಕಸಭೆಯಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತನ್ನು ರದ್ದುಪಡಿಸಲಾಗಿದೆ ಎಂದು India Today ವರದಿ ಮಾಡಿದೆ.
ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಕಾಂಗ್ರೆಸ್ ನಾಯಕ ಅಧೀರ್ ರಾಜನ್ ಚೌಧರಿ ಅವರ ಅಮಾನತು ರದ್ದುಗೊಳಿಸಿದೆ.
ಬುಧವಾರ ಕಾಂಗ್ರೆಸ್ ಸಂಸದ ಚೌಧರಿ ಅವರು ಸಮಿತಿಯ ಮುಂದೆ ಹಾಜರಾದ ನಂತರ ಸಮಿತಿಯು ಅಮಾನತು ಹಿಂಪಡೆಯಲು ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಿತು.
ಮಣಿಪುರ ಹಿಂಸಾಚಾರದ ಮೇಲಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕನನ್ನು ಆಗಸ್ಟ್ 11 ರಂದು ಅಶಿಸ್ತಿನ ವರ್ತನೆಗಾಗಿ ಅಮಾನತುಗೊಳಿಸಲಾಯಿತು. ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಾರಿಯಾದ ಬಿಲಿಯನೇರ್ ನೀರವ್ ಮೋದಿ ಹಾಗೂ ಧೃತರಾಷ್ಟ್ರನಿಗೆ ಹೋಲಿಸಿದ್ದಾರೆ.
ನನಗೆ ‘ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ’ ಎಂದು ವಿಶೇಷಾಧಿಕಾರ ಸಮಿತಿ ಎದುರು ಚೌಧರಿ ಹೇಳಿದ್ದು, ಮುಂಗಾರು ಅಧಿವೇಶನದ ವೇಳೆ ಸಂಸತ್ತಿನ ಒಳಗೆ ಅವರು ಮಾಡಿದ ಟೀಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಸಿಂಗ್ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಸಮಿತಿಯ ಅಧ್ಯಕ್ಷರ ಮೂಲಕ ಲೋಕಸಭೆ ಸ್ಪೀಕರ್ಗೆ ವರದಿ ಸಲ್ಲಿಸಲಿದೆ.





