ಐಬಿ ಸಿಬ್ಬಂದಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣ: AAP ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಸಹಿತ ಐವರು ದೋಷಿಗಳು

ತಾಹಿರ್ ಹುಸೈನ್ - ಅಂಕಿತ್ ಶರ್ಮಾ | Photo Credit: PTI
ಹೊಸದಿಲ್ಲಿ, ಜು. 13: ಹೊಸದಿಲ್ಲಿಯಲ್ಲಿ 2020ರಲ್ಲಿ ನಡೆದ ಗಲಭೆ ಸಂದರ್ಭ ಗುಪ್ತಚರ ಇಲಾಖೆ (ಐಬಿ) ಸಿಬ್ಬಂದಿ ಅಂಕಿತ್ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಮತ್ತು ಇತರ ನಾಲ್ವರನ್ನು ಸೋಮವಾರ ದೋಷಿಗಳು ಎಂದು ಪರಿಗಣಿಸಿದೆ.
ದೋಷಿಗಳೆಂದು ನಿರ್ಣಯಿಸಲಾದ ಇತರರೆಂದರೆ ಜಾವೇದ್, ಅನಾಸ್, ನಾಝಿಮ್ ಮತ್ತು ಖಾಸಿಂ. ಈ ಪ್ರಕರಣದಲಿ ಆರು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಗಲಭೆ ಸಂದರ್ಭದಲ್ಲಿ ಗುಂಪೊಂದು ಶರ್ಮಾ ಅವರನ್ನು ಹತ್ಯೆಗೈದಿತ್ತು ಮತ್ತು ಅವರ ಮೃತದೇಹವನ್ನು ಚರಂಡಿಗೆ ಎಸೆದಿತ್ತು.
2020 ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರ ನಡುವೆ ಕೋಮ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು.
Next Story




