ವಿರಾಟ್ ಕೊಹ್ಲಿಯಿಂದ ವಿಶೇಷ ಉಡುಗೊರೆ ಸ್ವೀಕರಿಸಿದ ತಮಿಳುನಾಡು ಸಿಎಂ ವಿಜಯ್

ಮುಖ್ಯಮಂತ್ರಿ ವಿಜಯ್ , ವಿರಾಟ್ ಕೊಹ್ಲಿ | Photo Credit : PTI
ಹೊಸದಿಲ್ಲಿ, ಮೇ 23: ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿಯಾದ ನಂತರ ಸಿ.ಜೋಸೆಫ್ ವಿಜಯ್ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ರಾಜಕಾರಣಿಯಾಗಿ ಪರಿವರ್ತಿತ ನಟ ವಿಜಯ್ ಅವರು ಭಾರತೀಯ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಸಹಿ ಮಾಡಿರುವ ಕ್ರಿಕೆಟ್ ಬ್ಯಾಟ್ ಅನ್ನು ಸ್ವೀಕರಿಸಿದ್ದಾರೆ.
ತಮಿಳುನಾಡಿನ ಸಚಿವಾಲಯದಲ್ಲಿ ವಿಜಯ್ ಅವರು ಹಿಡಿದುಕೊಂಡಿರುವ ಬ್ಯಾಟ್ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕ್ಷಿಪ್ರವಾಗಿ ವೈರಲ್ ಆಗಿವೆ.
ವಿಜಯ್ ಅವರನ್ನು ಭೇಟಿಯಾದ ಎಂಆರ್ಎಫ್ನ ಅಧಿಕಾರಿಗಳು ಬ್ಯಾಟ್ ಅನ್ನು ಪ್ರದಾನಿಸಿದರು. ಕಂಪೆನಿಯ ಅಧ್ಯಕ್ಷರು, ಆಡಳಿತ ನಿರ್ದೇಶಕರು ನಿಯೋಗದ ಭಾಗವಾಗಿದ್ದರು.
ಸಭೆಯ ವೇಳೆ ಎಂಆರ್ಎಫ್ನ ವ್ಯವಹಾರ ಚಟುವಟಿಕೆಗಳು ಹಾಗೂ ತಮಿಳುನಾಡಿನಲ್ಲಿ ಕಾರ್ಯಾಚರಿಸುತ್ತಿರುವ ಕುರಿತಂತೆ ಹೆಚ್ಚಿನ ಗಮನ ನೀಡಲಾಯಿತು.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ವಿಜಯ್ 2026ರ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.




