ತಮಿಳುನಾಡು: ಸಮುದ್ರ ಮಧ್ಯೆ ದಾಳಿ ಭುಗಿಲೆದ್ದ ಮೀನುಗಾರರ ಪ್ರತಿಭಟನೆ
ಚೆನ್ನೈ: ಕಳೆದ ಒಂದು ತಿಂಗಳ ಅವಧಿಯಲ್ಲಿ ಸಮುದ್ರ ಮಧ್ಯೆ ತಮಿಳುನಾಡಿನ ನಾಗಪಟ್ಟಿಣಂ ಹಾಗೂ ರಾಮನಾಥಪುರಂನ ಮೀನುಗಾರರ ಮೇಲೆ ಶ್ರೀಲಂಕಾದವರು ಐದು ಬಾರಿ ದಾಳಿ ನಡೆಸಿದ ಬಳಿಕ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
‘‘ ಸಮುದ್ರ ಮಧ್ಯೆ ಶ್ರೀಲಂಕಾದವರು ನಮ್ಮ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ನಮ್ಮ ದುಬಾರಿ ಬೆಲೆಯ ಮೀನುಗಾರಿಕೆ ಬಲೆ, ಜಿಪಿಎಸ್ ಅನ್ನು ಬಲವಂತದಿಂದ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ನಮಗೆ ಕೂಡಲೇ ಪರಿಹಾರ ಸಿಗಬೇಕಾಗಿದೆ. ಇಲ್ಲದೇ ಇದ್ದರೆ, ರಸ್ತೆ ತಡೆ ಹಾಗೂ ಸಮುದ್ರಕ್ಕೆ ತೆರಳಿದಿರುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.’’ ಎಂದು ನಾಗಪಟ್ಟಿಣಂನ ಮೀನುಗಾರರ ಸಂಘಟನೆಯ ನಾಯಕ ಆರ್. ಅರ್ಮುಗಂ ಹೇಳಿದ್ದಾರೆ.
ಸಮುದ್ರ ಮಧ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ 8 ಮೀನುಗಾರರು ಶುಕ್ರವಾರ ರಾತ್ರಿ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದಾಗ ಅನಾಮಿಕ ವ್ಯಕ್ತಿಗಳು ದಾಳಿ ನಡೆಸಿದ್ದಾರೆ.
Next Story





