ತೆಲಂಗಾಣ | ಮಾವೋವಾದಿ ನಾಯಕಿ ಶರಣಾಗತ

PC | NDTV
ಹೈದರಾಬಾದ್, ಸೆ.13: ಮಾವೋವಾದಿಗಳ ವಿರುದ್ಧದ ಹೋರಾಟದ ಪ್ರಮಖ ಬೆಳವಣಿಗೆಯೊಂದರಲ್ಲಿ 2011ರಲ್ಲಿ ಹತ್ಯೆಯಾದ ಮಾವೋವಾದಿ ಕಮಾಂಡರ್ ಕಿಷನ್ ಜಿ ಅವರ ಪತ್ನಿ ಹಾಗೂ ಮಾವೋವಾದಿ ನಾಯಕಿ ತೆಲಂಗಾಣ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ.
ಕಲ್ಪನಾ ಎಂದು ಕರೆಯಲಾಗುತ್ತಿದ್ದ ಪೋಥುಲ ಪದ್ಮಾವತಿ (62) ಅವರು 1982ರಿಂದ ಭೂಗತರಾಗಿದ್ದರು. ಅವರ ತಲೆಗೆ 1 ಕೋ.ರೂ. ಬಹುಮಾನ ಘೋಷಿಸಲಾಗಿತ್ತು. ಅವರು ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ ಜನತಾನ ಸರ್ಕಾರ್ (ಜನತಾ ಸರಕಾರ)ನ ಉಸ್ತುವಾರಿ ಹಾಗೂ ದಕ್ಷಿಣ ಉಪ ವಲಯ ಬ್ಯುರೊ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರು ನಿಷೇಧಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಸದಸ್ಯರು ಕೂಡ ಆಗಿದ್ದರು.
ಪದ್ಮಾವತಿ ಅವರು ಹೈದರಾಬಾದ್ನಲ್ಲಿ ಶನಿವಾರ ತೆಲಂಗಾಣ ಡಿಜಿಪಿ ಜಿತೇಂದ್ರ ಅವರ ಮುಂದೆ ಶರಣಾಗತರಾಗಿದ್ದಾರೆ.
Next Story





