ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣದ ಕಾರ್ಟೂನ್ ಶೇರ್ ಮಾಡಿದ ಭೋಜ್‌ಪುರಿ ಗಾಯಕಿ ವಿರುದ್ಧ ಕೇಸ್ !

"ಈ ಪ್ರಕರಣವನ್ನು ಖಂಡಿಸಿದ್ದಕ್ಕಾಗಿ ನನ್ನ ವಿರುದ್ಧ ಬಿಜೆಪಿ ನಾಯಕನೋರ್ವ ಪ್ರಕರಣ ದಾಖಲಿಸಿದ್ದಾರೆ" ಎಂದು ಅವರು ಬಳಿಕದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹೊಸದಿಲ್ಲಿ: ಬಿಜೆಪಿ ಕಾರ್ಯಕರ್ತನೋರ್ವ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಟೂನ್ ಅನ್ನು ಶೇರ್ ಮಾಡಿದ ಭೋಜ್‌ಪುರಿ ಹಾಡುಗಾರ್ತಿ ನೇಹಾ ಸಿಂಗ್ ರಾಥೋರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನೇಹಾ ಸಿಂಗ್ ʼಯುಪಿ ಮೆ ಕಾ ಬಾʼ ಎಂಬ ಹಾಡಿನ ಮೂಲಕ ಪ್ರಸಿದ್ಧಿ ಪಡೆದಿದ್ದರು. ಅವರು ಶೇರ್ ಮಾಡಿದ ವ್ಯಂಗ್ಯ ಚಿತ್ರದಲ್ಲಿ, ಅರ್ಧ ತೋಳಿನ ಬಿಳಿ ಬಟ್ಟೆ ಧರಿಸಿದ, ಕಪ್ಪು ಟೋಪಿಯನ್ನು ಧರಿಸಿದ ಮತ್ತು ತನ್ನ ಖಾಕಿ ಬಣ್ಣದ ಚಡ್ಡಿಯನ್ನು ಪಕ್ಕದಲ್ಲಿರಿಸಿರುವುದನ್ನು ಚಿತ್ರಿಸಲಾಗಿದೆ.
"ಈ ಪ್ರಕರಣವನ್ನು ಖಂಡಿಸಿದ್ದಕ್ಕಾಗಿ ನನ್ನ ವಿರುದ್ಧ ಬಿಜೆಪಿ ನಾಯಕನೋರ್ವ ಪ್ರಕರಣ ದಾಖಲಿಸಿದ್ದಾರೆ" ಎಂದು ಅವರು ಬಳಿಕದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.ಈ ವರ್ಷದ ಫೆಬ್ರವರಿಯಲ್ಲಿ ರಾಥೋಡ್ ಅವರ ಯುಪಿ ಮೆ ಕಾ ಬಾ ಹಾಡಿಗೆ ನೋಟೀಸ್ ನೀಡಲಾಗಿತ್ತು. ಇದು ಕಾನ್ಪುರದಲ್ಲಿ ಬುಲ್ಡೋಝರ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಾಯಿ ಮಗಳು ಮೃತಪಟ್ಟ ಘಟನೆಯನ್ನು ಹೊಂದಿತ್ತು.
Next Story







