ಏರು ಹಾದಿಯಲ್ಲಿರುವ ಚಿನ್ನ-ಬೆಳ್ಳಿ ದರ; ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಭೌಗೋಳಿಕ ಉದ್ವಿಗ್ನತೆ ಹೆಚ್ಚಾದರೆ ಹಣದುಬ್ಬರ ಭಯ ತೀವ್ರಗೊಂಡು ಚಿನ್ನದ ದರ ಕುಸಿಯಬಹುದು.
ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರ ಏರು ಹಾದಿಯಲ್ಲಿದೆ. ಆದರೆ, ಅಮೆರಿಕದ ಡಾಲರ್ ಆರು ವಾರಗಳ ಗರಿಷ್ಠ ಮಟ್ಟದಲ್ಲಿದ್ದ ಕಾರಣ ಮತ್ತು ನಿರಂತರ ಹಣದುಬ್ಬರದ ಕಳವಳಗಳ ನಡುವೆ ಖಜಾನೆ ಇಳುವರಿ (Treasury yields) ಏರಿಕೆಯಾದ ಕಾರಣ ಚಿನ್ನದ ಮೌಲ್ಯ ಒತ್ತಡದಲ್ಲಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಅಮೆರಿಕ-ಇರಾನ್ ಸಂಘರ್ಷದ ಸುತ್ತಲಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು, ಕಚ್ಚಾ ತೈಲ ಬೆಲೆಗಳು ಮತ್ತು ಹಣದುಬ್ಬರದ ಮೇಲಿನ ಪರಿಣಾಮದಿಂದ ಪ್ರಭಾವಿತವಾಗುವುದು ಮುಂದುವರಿದಿದೆ. ದೇಶೀಯ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೆಚ್ಚಿನ ಆಮದು ಸುಂಕಗಳೊಂದಿಗೆ ಬೇಡಿಕೆ ಸೀಮಿತವಾಗುವ ಸಾಧ್ಯತೆಯಿದೆ.
ಹೂಡಿಕೆದಾರರು ಅಮೆರಿಕ-ಇರಾನ್ ಮಾತುಕತೆಗಳು, ಹೆಚ್ಚುತ್ತಿರುವ ಖಜಾನೆ ಇಳುವರಿಗಳು, ಹಣದುಬ್ಬರದ ಅಪಾಯಗಳು ಮತ್ತು ಬೆಳ್ಳಿಯ ಬೆಲೆಗಳ ಮೇಲಿನ ಸೂಚನೆಗಳಿಗಾಗಿ ಫೆಡರಲ್ ರಿಸರ್ವ್ ನೀತಿ ನಿರೀಕ್ಷೆಗಳು ಸೇರಿದಂತೆ ಅನೇಕ ಪ್ರಚೋದಕಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಆದರೆ ಭೌಗೋಳಿಕ ಉದ್ವಿಗ್ನತೆ ಹೆಚ್ಚಾದರೆ ಹಣದುಬ್ಬರ ಭಯ ತೀವ್ರಗೊಂಡು ಚಿನ್ನದ ದರ ಕುಸಿಯಬಹುದು.
ಮತ್ತೆ ಏರಿದ ಚಿನ್ನದ ದರ
ಮೇ 21ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 49 ರೂ. ಏರಿಕೆ ಕಂಡು ಹತ್ತು ಗ್ರಾಂ ಬೆಲೆ 1,59,930 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 45 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,46,600 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 37 ರೂ. ಏರಿಕೆಯಾಗಿ ಹತ್ತು ಗ್ರಾಂಗೆ 1,19,950 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮೇ 21ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,993 (+49) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,660 (+45) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,995 (+37) ರೂ. ಬೆಲೆಗೆ ತಲುಪಿದೆ.
ಇಂದಿನ ಬೆಳ್ಳಿಯ ದರವೆಷ್ಟು?
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿಯ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಏಪ್ರಿಲ್ ಆರಂಭದಲ್ಲಿ 2,55,000 ರೂ. ಗೆ ಬಂದು ತಲುಪಿದ ನಂತರ, ಬಹುತೇಕ ತಿಂಗಳಿಡೀ ಅದೇ ಬೆಲೆಯಲ್ಲಿ ಮುಂದುವರಿದಿತ್ತು. ಕಳೆದ ವಾರದಿಂದ ಬೆಳ್ಳಿಯ ಬೆಲೆ ಏರುತ್ತಲೇ ಇದೆ. ಕಳೆದ ಶನಿವಾರ ಪ್ರತಿ ಗ್ರಾಂಗೆ 10 ರೂ. ಕಡಿಮೆಯಾಗಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,80,000 ರೂ.ಗೆ ಬಂದು ನಿಂತಿದೆ. ಸೋಮವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,79,900 ರೂ.ಗೆ ಕುಸಿದಿದೆ. ಮಂಗಳವಾರ ಕೆಜಿ ಬೆಳ್ಳಿಗೆ 2,90,100 ರೂ. ಆಗಿತ್ತು. ಬುಧವಾರ ಬೆಳ್ಳಿಯ ಬೆಲೆ 5 ರೂ. ಕಡಿಮೆಯಾಗಿ ಪ್ರತಿ ಕೆಜಿಗೆ 2,80,000 ರೂ.ಗೆ ಕುಸಿದಿತ್ತು. ಇದೀಗ ಗುರುವಾರ ಬೆಳ್ಳಿಯ ಮೌಲ್ಯ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,85,000 ರೂ.ಗೆ ಬಂದು ತಲುಪಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,023 (+64) ರೂ., 22 ಕ್ಯಾರೆಟ್ ಚಿನ್ನದ ದರ 14,675 (+45) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,993 (+49) ರೂ., 22 ಕ್ಯಾರೆಟ್ ಚಿನ್ನದ ದರ 14,660 (+45) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,013 (+64) ರೂ., 22 ಕ್ಯಾರೆಟ್ ಚಿನ್ನದ ದರ 14,665 (+45) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,167 (+76) ರೂ., 22 ಕ್ಯಾರೆಟ್ ಚಿನ್ನದ ದರ 14,810 (+60) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,993 (+49) ರೂ., 22 ಕ್ಯಾರೆಟ್ ಚಿನ್ನದ ದರ 14,660 (+45) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,993 (+49) ರೂ., 22 ಕ್ಯಾರೆಟ್ ಚಿನ್ನದ ದರ 14,660 (+45) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 16,023 (+64) ರೂ., 22 ಕ್ಯಾರೆಟ್ ಚಿನ್ನದ ದರ 14,675 (+45) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,023 (+64) ರೂ., 22 ಕ್ಯಾರೆಟ್ ಚಿನ್ನದ ದರ 14,675 (+45) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,023 (+64) ರೂ., 22 ಕ್ಯಾರೆಟ್ ಚಿನ್ನದ ದರ 14,675 (+45) ರೂ.






