ಸದ್ದಿಲ್ಲದೆ ಜರ್ಮನಿಯಲ್ಲಿ ವಿವಾಹವಾದ ಟಿಎಂಸಿ ಸಂಸದೆ ಮಹುಆ ಮೊಯಿತ್ರಾ !

Photo credit: telegraphindia.com
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುಆ ಮೊಯಿತ್ರಾ ಮೇ 30ರಂದು ಸದ್ದಿಲ್ಲದೆ ವಿವಾಹವಾಗಿದ್ದಾರೆ ಎಂದು telegraphindia.com ವರದಿ ಮಾಡಿದೆ.
ವಿವಾಹದ ಬಗ್ಗೆ ಮಹುಆ ಮೊಯಿತ್ರಾ ಎಲ್ಲಿಯೂ ಹೇಳಿಕೊಂಡಿಲ್ಲ. ಟಿಎಂಸಿಯ ನಾಯಕರಿಗೂ ತಿಳಿದಿಲ್ಲ. ವಿವಾಹದ ಬಗ್ಗೆ ಕೇಳಿದಾಗ, ತೃಣಮೂಲ ಸಂಸದರೊಬ್ಬರು, ʼಈ ಬಗ್ಗೆ ನನಗೆ ತಿಳಿದಿಲ್ಲʼ ಎಂದು ಹೇಳಿದ್ದಾರೆ.
ಜರ್ಮನಿಯಲ್ಲಿ ಪತಿ ಪಿನಾಕಿ ಮಿಶ್ರಾ ಜೊತೆ ಮಹುಆ ಮೊಯಿತ್ರಾ ಇರುವ ಪೋಟೊ ವೈರಲ್ ಆಗಿದೆ.
ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾಗಿರುವ ಪಿನಾಕಿ ಮಿಶ್ರಾ ದಿಲ್ಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 1996ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಪುರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇದಾದ ಒಂದು ದಶಕದ ಬಳಿಕ 2009ರಲ್ಲಿ ಬಿಜೆಡಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ ಅವರು 2009 ರಿಂದ 2019ರವರೆಗೆ ಮೂರು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದರು. 2024 ರಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಮಿಶ್ರಾ ಅವರಿಗೆ ಈ ಹಿಂದೆ ವಿವಾಹವಾಗಿದ್ದು, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಮಹುಆ ಮೊಯಿತ್ರಾ ಅವರು ಈ ಹಿಂದೆ ಲಾರ್ಸ್ ಬ್ರೋರ್ಸನ್ ಅವರನ್ನು ವಿವಾಹವಾಗಿದ್ದರು. ಆ ಬಳಿಕ ಅವರಿಂದ ವಿಚ್ಛೇದನ ಪಡೆದಿದ್ದರು.





