Madhya Pradesh | ತ್ವಿಶಾ ಶರ್ಮಾ ಟೆರೇಸ್ ನತ್ತ ಹೋಗುತ್ತಿರುವುದು, 1 ಗಂಟೆ ಬಳಿಕ ಪತಿ ಆಕೆಯ ಶವವನ್ನು ಕೆಳಗೆ ತರುತ್ತಿರುವುದು ಸಿಸಿಟಿವಿಯಲ್ಲಿ ಪತ್ತೆ

Screengrab : X
ಭೋಪಾಲ, ಮೇ 19: ಮೂವತ್ಮೂರು ವರ್ಷದ ತ್ವಿಶಾ ಶರ್ಮಾ ಅವರ ಶಂಕಿತ ವರದಕ್ಷಿಣೆ ಕಿರುಕುಳದ ಸಾವಿನ ಪ್ರಕರಣಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಹೊಸ ತಿರುವು ನೀಡಿವೆ.
ಮೇ 12ರಂದು ಸಾವನ್ನಪ್ಪುವ ಮುನ್ನ ತ್ವಿಶಾ ಶರ್ಮಾ ಭೋಪಾಲದ ಅವರ ಮನೆಯ ಟೆರೇಸ್ ನತ್ತ ನಡೆದುಕೊಂಡು ಹೋಗುತ್ತಿರುವುದು, ಅನಂತರ ಒಂದು ಗಂಟೆಯ ಬಳಿಕ ಆಕೆಯ ಪತಿ ಸಮರ್ಥ್ ಸಿಂಗ್ ಮತ್ತು ಇಬ್ಬರು ವ್ಯಕ್ತಿಗಳು ಆಕೆಯ ಶವವನ್ನು ಮೆಟ್ಟಿಲುಗಳ ಮೂಲಕ ಕೆಳಗೆ ತರುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ.
ಟೆರೇಸ್ನಲ್ಲಿ ಅಳವಡಿಸಲಾಗಿದ್ದ ವ್ಯಾಯಾಮ ಮಾಡುವ ರಾಡ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ತ್ವಿಶಾ ಪತ್ತೆಯಾಗಿದ್ದರು ಎಂದು ಅವರ ಅತ್ತೆ ಮತ್ತು ಮಾವ ಹೇಳಿದ್ದಾರೆ.
ತ್ವಿಶಾ ಅವರನ್ನು ಕೆಳಗೆ ತಂದ ಕೂಡಲೇ ಮೆಟ್ಟಿಲುಗಳ ಮೇಲೆಯೇ ಅವರಿಗೆ ಸಿಪಿಆರ್ ನೀಡಲು ಪ್ರಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
ಕೂತೂಹಲಕಾರಿ ವಿಷಯವೆಂದರೆ, ಈ ಘಟನೆ ಮೇ 12ರಂದು ನಡೆದಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ದಿನಾಂಕ ಮೇ 10 ಎಂದು ತೋರಿಸುತ್ತಿದೆ. ಸಿಸಿಟಿವಿಯ ತಾಂತ್ರಿಕ ದೋಷ ಇದಕ್ಕೆ ಕಾರಣ ಎಂದು ತ್ವಿಶಾ ಅವರ ಅತ್ತೆ ಮತ್ತು ಮಾವ ಪೊಲೀಸರಿಗೆ ತಿಳಿಸಿದ್ದಾರೆ.
ತ್ವಿಶಾ ಅವರ ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ತ್ವಿಶಾ ಅವರ ಕುಟುಂಬ ವರದಕ್ಷಿಣೆ ಕಿರುಕುಳ ಮತ್ತು ಹತ್ಯೆ ಆರೋಪ ಮಾಡಿದ ಬಳಿಕ ಈ ಪ್ರಕರಣ ಮಧ್ಯಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣದ ಬಗ್ಗೆ ಈಗ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.
A CCTV video captures the final moments of Twisha Sharma walking towards the terrace before she was found dead. Subsequent footage shows family members and others attempting CPR. The case raises several disturbing questions, and much remains to be uncovered. pic.twitter.com/tn9laGDfrI
— Sapna Madan (@sapnamadan) May 19, 2026






