‘‘ಕಾಕ್ರೋಚ್’’ಗಳಿಗೆ ಮಮತಾ ಬ್ಯಾನರ್ಜಿ ಬೆಂಬಲ

ಮಮತಾ ಬ್ಯಾನರ್ಜಿ | Photo Credit : PTI
ಹೊಸದಿಲ್ಲಿ, ಮೇ 25: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ‘ಕಾಕ್ರೋಚ್ ಜನತಾ ಪಾರ್ಟಿ’ಗೆ ‘‘ಮೆಚ್ಚುಗೆ ಮತ್ತು ಸಂಪೂರ್ಣ ಬೆಂಬಲ’’ ವ್ಯಕ್ತಪಡಿಸಿದ್ದಾರೆ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಒಬ್ರಿಯನ್ ಸೋಮವಾರ ತಿಳಿಸಿದ್ದಾರೆ.
ಎಕ್ಸ್ ಜಾಲ ತಾಣದ ಪೋಸ್ಟ್ನಲ್ಲಿ ಒಬ್ರಿಯಾನ್, ಪಶ್ಚಿಮಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಉಂಟಾದ ಹಿನ್ನೆಲೆಯಲ್ಲಿ ಟಿಎಂಸಿ ಸರಣಿ ಆಂತರಿಕ ಪರಿಶೀಲನಾ ಸಭೆಗಳನ್ನು ನಡೆಸಿದೆ. ಇದರ ನಡುವೆಯೂ ಉಭಯ ನಾಯಕರು ಉತ್ತಮ ರೀತಿಯಲ್ಲಿ ಹೋರಾಟವನ್ನು ಮುಂದುವರಿವತ್ತ ಗಮನ ಹರಿಸಿದ್ದಾರೆ ಎಂದಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಬೋಸ್ಟನ್ ಮೂಲದ ಅಭಿಜಿತ್ ದಿಪ್ಕೆ ಅವರು ಮೇ 16ರಂದು ಆರಂಭಿಸಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿ ಹೇಳಿಕೆ ನೀಡಿದ ಬಳಿಕ ಈ ಚಳುವಳಿ ಹುಟ್ಟಿಕೊಂಡಿದೆ.
Next Story




