ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ; ಶೇ.50ರಷ್ಟು URL ತೆಗೆದು ಹಾಕಿದ ಎಕ್ಸ್

Photo Credit : X
ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ‘ಸಹಯೋಗ್ ಪೋರ್ಟಲ್’ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರ ಐಟಿ ಕಾಯ್ದೆಯಡಿ 1,100ಕ್ಕೂ ಹೆಚ್ಚು URLಗಳನ್ನು ತೆಗೆದು ಹಾಕುವಂತೆ ಆದೇಶವನ್ನು ನೀಡಲಾಗಿದೆ.
ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ‘ಸಹಯೋಗ್ ಪೋರ್ಟಲ್’ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರ ಐಟಿ ಕಾಯ್ದೆಯಡಿ ವಿಭಿನ್ನ ಖಾತೆಗಳಿಗೆ ಸಂಬಂಧಿಸಿದ 1,100ಕ್ಕೂ ಹೆಚ್ಚು URLಗಳನ್ನು ತೆಗೆದು ಹಾಕುವಂತೆ ಆದೇಶವನ್ನು ನೀಡಲಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 79(3)(b) ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ ತನ್ನ ಅಂಗ ಸಂಸ್ಥೆಯಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಮೂಲಕ ಈ ಆದೇಶಗಳನ್ನು ನೀಡಿದೆ. ಎಕ್ಸ್ ಸಾಮಾಜಿಕ ಜಾಲತಾಣ ಕೇಂದ್ರ ಗೃಹ ಸಚಿವಾಲಯದ ಸಹಯೋಗ್ ಪೋರ್ಟಲ್ ಜೊತೆಗೆ ಸಮನ್ವಯಕ್ಕೆ ನಿರಾಕರಿಸಿದ ನಂತರವೂ ಐಟಿ ಕಾಯ್ದೆಯಡಿ ಈ ಆದೇಶವನ್ನು ನೀಡಿದೆ.
ಇವುಗಳಲ್ಲಿ ಅರ್ಧದಷ್ಟು (566) ಆದೇಶಗಳನ್ನು ‘ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಅಪರಾಧಕ್ಕಾಗಿ ನೀಡಲಾಗಿದೆ. ಉಳಿದವುಗಳಲ್ಲಿ 124 ಆದೇಶಗಳನ್ನು ರಾಜಕೀಯ ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಗುರಿಪಡಿಸಿರುವುದಕ್ಕಾಗಿ ನೀಡಲಾಗಿದೆ.
2024 ಮಾರ್ಚ್ 20ರಿಂದ 2025 ನವೆಂಬರ್ 7ರ ನಡುವೆ ನೀಡಲಾದ ಈ ನೋಟೀಸ್ ಗಳ ವಿವರಗಳನ್ನು ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ ಮುಂದೆ ಇಟ್ಟಿದೆ. ಅವುಗಳಲ್ಲಿ 58 ಆದೇಶಗಳನ್ನು ಎಕ್ಸ್ ಗೆ ಕಳೆದ ವರ್ಷ ನೀಡಲಾಗಿದೆ. 24 ಆದೇಶಗಳನ್ನು ಸಾರ್ವಜನಿಕ ಶಾಂತಿಗೆ ಭಂಗ ತರುವುದು ಮತ್ತು ಶತ್ರುತ್ವವನ್ನು ಪ್ರಚೋದಿಸಿರುವುದಕ್ಕಾಗಿ ನೀಡಲಾಗಿದೆ. ಮೂರು ಆದೇಶಗಳಲ್ಲಿ ಪೋಸ್ಟ್ ಮಾಡಲಾದ ವಿಷಯಗಳು ರಾಷ್ಟ್ರೀಯ ಐಕ್ಯತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಕಾರಣ ನೀಡಲಾಗಿದೆ.
►91 ಆದೇಶಗಳಲ್ಲಿ 14 ಮಾತ್ರ ಅಪರಾಧ
20 ತಿಂಗಳ ಅವಧಿಯಲ್ಲಿ 91 ನೋಟೀಸ್ ಗಳಲ್ಲಿ 14 ಮಾತ್ರ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದೆ. ಅಂದರೆ ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರ, ಅಧಿಕೃತ ಹ್ಯಾಂಡಲ್ ಗಳಂತೆ ಅನುಕರಣೆ ಮಾಡಿ ಹಣಕಾಸು ವಂಚನೆ ಮಾಡುವ ಸಾಧ್ಯತೆ ಮತ್ತು ಮಕ್ಕಳ ಮೇಲೆ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಮೆಟೀರಿಯಲ್ ಗಳ ಪ್ರಚಾರ ಇತ್ಯಾದಿ ಕಾರಣಗಳನ್ನು ನೀಡಲಾಗಿದೆ.
2024 ಮೇ 13ರಂದು ಒಂದು ಆದೇಶದಲ್ಲಿ 115 URLಗಳನ್ನು ತೆಗೆದು ಹಾಕುವಂತೆ ಹೇಳಲಾಗಿದೆ. “ಚುನಾವಣಾ ಪ್ರಕ್ರಿಯೆಯಲ್ಲಿ ಸುಳ್ಳು ಸುದ್ದಿಯನ್ನು ಹರಡಿ ಪ್ರಚಾರ ಮಾಡಲಾಗುತ್ತಿದೆ” ಎನ್ನುವ ಕಾರಣ ನೀಡಿ ಈ ಆದೇಶ ಕೊಡಲಾಗಿದೆ. 2024ರ ಏಪ್ರಿಲ್ ಮತ್ತು ಮೇ ನಡುವಿನ ಲೋಕಸಭಾ ಚುನಾವಣೆಯ ಅವಧಿಯಲ್ಲಿ 761 URLಗಳನ್ನು ತೆಗೆದು ಹಾಕುವಂತೆ ಎಕ್ಸ್ ಗೆ ನೋಟೀಸ್ ಕಳುಹಿಸಲಾಗಿತ್ತು. ಅವುಗಳಲ್ಲಿ 198 URLಗಳನ್ನು ರೆಪ್ರೆಸೆಂಟೇಶನ್ ಆಫ್ ಪೀಪಲ್ಸ್ ಆಕ್ಟ್ನ ಸೌಲಭ್ಯಗಳ ಉಲ್ಲಂಘನೆಗಾಗಿ ನಿರ್ದಿಷ್ಟವಾಗಿ ತೆಗೆದು ಹಾಕುವಂತೆ ಸೂಚಿಸಲಾಗಿತ್ತು.
ವಿಚಾರಣೆಯಾಗದ ‘ಎಕ್ಸ್’ ಮೊಕದ್ದಮೆ
ಸಹಯೋಗ್ ಪೋರ್ಟಲ್ ವಿರುದ್ಧ ಎಕ್ಸ್ ಸಂಸ್ಥೆಯ ನ್ಯಾಯಾಲಯದ ಮೊಕದ್ದಮೆ ಕರ್ನಾಟಕ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಉಳಿದಿದೆ. ಸಹಯೋಗ್ ಪೋರ್ಟಲ್ ಕೂಡ ಎಕ್ಸ್ ಸಂಸ್ಥೆಗೆ ಐಟಿ ಕಾಯ್ದೆಯ ಸೆಕ್ಷನ್ 79 (3)(b) ಅಡಿಯಲ್ಲಿ ಆದೇಶ ನೀಡಿದೆ. ಆದರೆ ಏನೇ ಯುಆರ್ಎಲ್ ತೆಗೆದು ಹಾಕುವ ಆದೇಶ ನೀಡುವುದಾದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನೀಡಬೇಕು ಎಂದು ಎಕ್ಸ್ ಸಂಸ್ಥೆ ತನ್ನ ನಿಲುವನ್ನು ಪ್ರಕಟಿಸಿದೆ. ಈ ಸೆಕ್ಷನ್ ಅಡಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಸುವ್ಯವಸ್ಥೆಯ ಉಲ್ಲಂಘನೆಗೆ ನೀಡಬಹುದಾದ ನಿರ್ದೇಶನಗಳಿಗೆ ಸೀಮಿತವಾಗಿದೆ. ಆದರೆ ಐಟಿ ಕಾಯ್ದೆಯ 79(3)(b) ಅಡಿಯಲ್ಲಿ ನೋಟೀಸ್ ಗಳನ್ನು ನೀಡುವುದು ನ್ಯಾಯಾಂಗ ಪ್ರಕ್ರಿಯೆಯಿಲ್ಲದೆ ವಿಷಯವನ್ನು ತೆಗೆದು ಹಾಕಲು ಅಥವಾ ನಿರ್ಬಂಧಿಸಲು ಅವಕಾಶ ನೀಡುತ್ತದೆ. ಈ ಕಾಯ್ದೆ ಸಾಮಾಜಿಕ ಮಾಧ್ಯಮಕ್ಕೆ ನಿರ್ದೇಶನ ನೀಡುವವರಿಗೆ ಸುಗಮ ಅವಕಾಶ ಕೊಡುತ್ತದೆ ಎಂದು ಎಕ್ಸ್ ಹೇಳಿದೆ.
ನಾಯಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಗುರಿ
ಒಂಭತ್ತು ನೋಟೀಸ್ ಗಳಲ್ಲಿ 21 URLಗಳನ್ನು ತೆಗೆದು ಹಾಕುವಂತೆ ಹೇಳುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ತಿರುಚಿದ ವಿಷಯಗಳೆಂದು ಹೇಳಲಾಗಿದೆ. ಇನ್ನೆರಡರಲ್ಲಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ತಿರುಚಿದ ಚಿತ್ರಗಳಿವೆ ಎಂದು ಕಾರಣ ನೀಡಲಾಗಿದೆ.
ಆರು ನೋಟೀಸ್ ಗಳಲ್ಲಿ 91 URLಗಳನ್ನು ತೆಗೆದು ಹಾಕುವಂತೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಅದರಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ವಿರುದ್ಧ ತಿರುಚಿದ ವಿಷಯಗಳನ್ನು ಪೋಸ್ಟ್ ಮಾಡಲಾಗಿತ್ತು ಎಂದು ಹೇಳಲಾಗಿದೆ. 2024 ಡಿಸೆಂಬರ್ 18ರಂದು ಕಳುಹಿಸಿದ ಆದೇಶದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ ಸೇರಿದಂತೆ 28 URLಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ. ಗೃಹ ಸಚಿವಾಲಯ ಕಳುಹಿಸಿದ ಇತರ 2 ಆದೇಶಗಳಲ್ಲಿ ಐಸಿಸಿ ಅಧ್ಯಕ್ಷ ಜೇ ಶಾರನ್ನು ಗುರಿ ಮಾಡಲು ನಕಲಿ ಮತ್ತು ಎಐ ರಚಿತ ಸುದ್ದಿಗಳನ್ನು ಪೋಸ್ಟ್ ಮಾಡಿರುವುದಾಗಿ ಹೇಳಲಾಗಿತ್ತು.
ಒಟ್ಟು 3 ಆದೇಶಗಳಲ್ಲಿ ಎರಡರಲ್ಲಿ ಪ್ರಧಾನಿ ಮತ್ತು ಕೇಂದ್ರ ಗೃಹ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ವಿರುದ್ಧ ಪೋಸ್ಟ್ ಮಾಡಿದ 14 URLಗಳನ್ನು ಅವಹೇಳನಕಾರಿ ಮತ್ತು ನೇರವಾಗಿ ತೆಗೆದು ಹಾಕಬೇಕು ಎಂದು ಸೂಚಿಸಿದೆ.
2024 ಜುಲೈರಂದು ಕಳುಹಿಸಿದ ಎರಡು ನೋಟೀಸ್ ಗಳಲ್ಲಿ 12 URL ತೆಗೆಯುವಂತೆ ಸೂಚಿಸಲಾಗಿತ್ತು. ಅವುಗಳಲ್ಲಿ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯವನ್ನು ಅವಹೇಳನ ಮಾಡಿರುವ ಆರೋಪ ಹೊರಿಸಲಾಗಿತ್ತು. 2024 ಜುಲೈ 9ರಂದು ಹಣಕಾಸು ಸಚಿವಾಲಯ ಮತ್ತು ಭಾರತ ಸರ್ಕಾರವನ್ನು ಅವಹೇಳನ ಮಾಡುವಂತಹ ಜಿಎಸ್ಟಿ/ಆದಾಯ ತೆರಿಗೆ ವ್ಯವಸ್ಥೆ ಕುರಿತ ಅವಹೇಳನಕಾರಿ ವಿಷಯಗಳನ್ನು ತೆಗೆಯುವಂತೆ ಸೂಚಿಸಲಾಗಿತ್ತು.
2024 ನವೆಂಬರ್ನಲ್ಲಿ ಕೆನಡಾದ ನಿಜ್ಜರ್ ಕೊಲೆಯ ಮೇಲಿನ ಸಿಬಿಸಿ ಸಾಕ್ಷ್ಯಚಿತ್ರವನ್ನು ತೆಗೆದು ಹಾಕುವಂತೆ ನೋಟೀಸ್ ಕಳುಹಿಸಲಾಗಿತ್ತು. ಪ್ರಧಾನಿ, ಗೃಹ ಸಚಿವರು ಸೇರಿದಂತೆ ಭಾರತದ ಸಾರ್ವಜನಿಕ ವ್ಯಕ್ತಿಗಳ ವರ್ಚಸ್ಸನ್ನು ಹಾಳುಗೆಡವಲಾಗುತ್ತಿದೆ ಎಂದು ಕಾರಣ ನೀಡಲಾಗಿತ್ತು.
►ಚುನಾವಣೆ ಮೇಲೆ ಪ್ರಭಾವ
2024 ಮೇನಲ್ಲಿ ನೀಡಲಾದ ಒಂಭತ್ತು ನೋಟೀಸ್ ಗಳಲ್ಲಿ 198 ಚುನಾವಣಾ ಸಂಬಂಧಿತ ಯುಆರ್ಎಲ್ ವಿರುದ್ಧ ಆದೇಶ ನೀಡಲಾಗಿತ್ತು. ಅವುಗಳಲ್ಲಿ 115 URLಗಳು ವಿಪಕ್ಷಗಳಿಗೆ ಸೇರಿದ್ದವು.
2024 ಮೇ 27ರಂದು ಆಪ್ ಪಕ್ಷಕ್ಕೆ ಸಂಬಂಧಿ ಏಳು ಯುಆರ್ಎಲ್ ತೆಗೆಯುವಂತೆ ಹೇಳಿದಾಗ ಎಕ್ಸ್ ವಿರೋಧ ವ್ಯಕ್ತಪಡಿಸಿತ್ತು. ನಿರ್ಧಾರವನ್ನು ಮರುಮೌಲ್ಯಮಾಪನ ಮಾಡಲು I4C ನೀಡುವಂತೆ ಎಕ್ಸ್ ಕೇಳಿತ್ತು.
ಆಪರೇಷನ್ ಸಿಂಧೂರ್
ಐದು ನೋಟೀಸ್ ಗಳಲ್ಲಿ 56 URLಗಳನ್ನು ತೆಗೆದು ಹಾಕುವಂತೆ ಹೇಳಲಾಗಿತ್ತು. ಅದರಲ್ಲಿ ಭಾರತದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಬರುವ ಆರೋಪ ಹೊರಿಸಲಾಗಿತ್ತು.
ಈ ವರ್ಷ ಏಪ್ರಿಲ್ 28ರಂದು ಪಹಲ್ಗಾಮ್ ದಾಳಿಯ ನಂತರ ಅಕ್ರಮ ಚಟುವಟಿಕೆಯ (ಯುಎಪಿಎ) ಸೆಕ್ಷನ್ 13ರ ಉಲ್ಲಂಘನೆಯ ಕಾರಣ ನೀಡಿ ಭಾರತ ರಾಷ್ಟ್ರದ ವಿರುದ್ಧ ಬೆದರಿಕೆ ಒಡ್ಡುವ ಸಂದೇಶಗಳನ್ನು ಹರಡುವ ಆರೋಪ ಹೊರಿಸಿ ಯುಆರ್ಎಲ್ ತೆಗೆದು ಹಾಕಲು ಸೂಚಿಸಲಾಗಿತ್ತು.
ಆಪರೇಶನ್ ಸಿಂಧೂರ್ ಬಳಿಕ ಮೇಯಲ್ಲಿ ಗೃಹಸಚಿವಾಲಯ ಎಕ್ಸ್ ಗೆ ಎರಡು ನೋಟೀಸ್ ಗಳನ್ನು ಕಳುಹಿಸಿ “ಭಾರತೀಯ ಸೇನೆಗೆ ನಿರ್ಣಾಯಕವಾಗಿರುವ” ವಿಷಯಗಳಿರುವ URLಗಳನ್ನು ತೆಗೆಯುವಂತೆ ಸೂಚಿಸಿತ್ತು. ಭಾರತೀಯರನ್ನು ತಪ್ಪು ದಾರಿಗೆ ಎಳೆಯುವ ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ಹಂಚಿಕೆಯಾಗುತ್ತಿರುವ ಆರೋಪ ಹೊರಿಸಲಾಗಿತ್ತು.
2025 ಏಪ್ರಿಲ್ ಮತ್ತು ಮೇ ನಡುವೆ I4C ಅಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಕಳುಹಿಸಿ ಎಕ್ಸ್ ಗೆ ಸೇರಿದ 78 ಲಿಂಕ್ಗಳನ್ನು ತೆಗೆಯುವಂತೆ ಸೂಚಿಸಲಾಗಿತ್ತು.
ಕೃಪೆ: Indianexpress.com







