ಉತ್ತರ ಪ್ರದೇಶ: ಇಬ್ಬರು ಬಾಲಕಿಯರ ಮೃತದೇಹ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಫರೂಕಾಬಾದ್ ಎಸ್ಪಿ ಅಲೋಕ್ ಪ್ರಿಯದರ್ಶಿ (Photo:X/@ANINewsUP)
ಲಕ್ನೊ : ಒಂದೇ ನೇಣಿಗೆ ಕೊರಳೊಡ್ಡಿದ ಸ್ಥಿತಿಯಲ್ಲಿ ಇಬ್ಬರು ಬಾಲಕಿಯರ ಮೃತದೇಹ ಉತ್ತರ ಪ್ರದೇಶದ ಕೈಮ್ಗಂಜ್ನ ಭಾಗೌತಿಪುರ್ ಗ್ರಾಮದಲ್ಲಿ ಮಂಗಳವಾರ ಪತ್ತೆಯಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆತ್ಮೀಯ ಸ್ನೇಹಿತತರಾಗಿದ್ದ 18 ಮತ್ತು 15 ವರ್ಷದ ಇಬ್ಬರು ಬಾಲಕಿಯರು ಮೃತಪಟ್ಟವರು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಫರೂಕಾಬಾದ್ ಎಸ್ಪಿ ಅಲೋಕ್ ಪ್ರಿಯದರ್ಶಿ,"ಇಬ್ಬರೂ ಬಾಲಕಿಯರು ಒಂದೇ ದುಪ್ಪಟ್ಟಾದಲ್ಲಿ ನೇಣು ಹಾಕಿಕೊಂಡಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತೋರುತ್ತದೆ. ಪೊಲೀಸರು ಘಟನಾ ಸ್ಥಳದಿಂದ ಒಂದು ಫೋನ್ ಮತ್ತು ಸಿಮ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
#WATCH | Uttar Pradesh | Farrukhabad SP Alok Priyadarshi says, "Today, we got the information from Bhagautipur village of Kaimganj that two girls (aged 18 and 15) were found hanging on a tree. Police reached there. It was found that both were close friends. Both were hanged in a… pic.twitter.com/CPPO1x3cXH
— ANI UP/Uttarakhand (@ANINewsUP) August 27, 2024