ಕೇಂದ್ರ ಬಜೆಟ್ 2026 | ನೀತಿ ಮುನ್ನೋಟದ ಕೊರತೆ: ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ, ಫೆ. 1: ಮೋದಿ ಸರ್ಕಾರದ ಚಿಂತನೆಗಳು ಖಾಲಿಯಾಗಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಿವಾರ ಹೇಳಿದ್ದಾರೆ.
2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಭಾರತದ ಹಲವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸವಾಲಗಳಿಗೆ ಒಂದೇ ಒಂದು ಪರಿಹಾರ ಒದಗಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
‘ಎಕ್ಸ್’ನ ಪೋಸ್ಟ್ನಲ್ಲಿ ಅವರು, ಈ ಬಜೆಟ್ನಲ್ಲಿ ನೀತಿ ಮುನ್ನೋಟ ಅಥವಾ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲ. ಈ ಬಜೆಟ್ ಯಾವುದೇ ಪರಿಹಾರ ನೀಡುವುದಿಲ್ಲ. ಸಾಮಾಜಿಕ ಸೇವೆಗಳ ಕ್ಷೇತ್ರಗಳಲ್ಲಿ ಹಲವನ್ನು ಕೈಬಿಡಲಾಗಿದೆ. ಈ ವೈಫಲ್ಯವನ್ನು ಮರೆಮಾಚಲು ಅವುಗಳ ಬಗ್ಗೆ ಒಂದು ಪ್ರಸ್ತಾವವನ್ನೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Next Story





