ಕೇಂದ್ರ ಬಜೆಟ್ 2026 | ಬಜೆಟ್ ನನಗೆ ಅಚ್ಚರಿ ಉಂಟು ಮಾಡಿದೆ: ಶಶಿ ತರೂರ್

ಶಶಿ ತರೂರ್ (File Photo: PTI)
ಹೊಸದಿಲ್ಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಕೇರಳದ ಬಗ್ಗೆ ಸಾಕಷ್ಟು ಉಲ್ಲೇಖಿಸದೇ ಇರುವುದು ತನಗೆ ಅಚ್ಚರಿ ಉಂಟು ಮಾಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ರವಿವಾರ ಹೇಳಿದ್ದಾರೆ.
‘‘ಬಜೆಟ್ ಭಾಷಣದಲ್ಲಿ ಅಲ್ಲಲ್ಲಿ ಮೀನುಗಾರಿಕೆ, ಗೋಡಂಬಿ ಹಾಗೂ ತೆಂಗಿನಕಾಯಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೇರಳಕ್ಕೆ ಪ್ರಯೋಜನ ಸಿಗಬಹುದಾಗಿದೆ. ಆದರೆ, ಕೇರಳದ ಹೆಸರನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ಕೇರಳದ ಸಂಸದನಾಗಿ, ಈ ಬಜೆಟ್ನಲ್ಲಿ ಸಂತೋಷಪಡಲು ಏನೂ ಇಲ್ಲ ಎಂದು ನಾನು ಹೇಳಲೇಬೇಕು’’ ಎಂದು ತರೂರ್ ಹೇಳಿದ್ದಾರೆ.
Next Story





