ಉತ್ತರ ಪ್ರದೇಶ: ಕಳ್ಳತನದ ಶಂಕೆಯಲ್ಲಿ ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ ದುಷ್ಕರ್ಮಿಗಳು

Photo credit: NDTV
ಸಿದ್ಧಾರ್ಥನಗರ:: ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿಗೆ ಕಳ್ಳತನದ ಶಂಕೆಯ ಮೇರೆಗೆ ಮೂತ್ರ ಕುಡಿಸಿ, ಅವರ ಗುದದ್ವಾರದಲ್ಲಿ ಹಸಿಮೆಣಸಿನಕಾಯಿಯನ್ನು ಉಜ್ಜಿ, ಬಲವಂತವಾಗಿ ಕೆಲವು ಅಪರಿಚಿತ ಚುಚ್ಚುಮದ್ದು ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಚಿತ್ರಹಿಂಸೆಗೆ ಒಳಗಾದವರು 10 ಮತ್ತು 15 ವರ್ಷದ ಬಾಲಕರು.
ದಾಳಿಯ ಭಯಾನಕ ವೀಡಿಯೊಗಳಲ್ಲಿ ಹುಡುಗರು ಹಸಿರು ಮೆಣಸಿನಕಾಯಿಯನ್ನು ತಿನ್ನುವಂತೆ ಮಾಡಿದ ಹಾಗೂ ಬಾಟಲಿಯಲ್ಲಿ ತುಂಬಿದ್ದ ಮೂತ್ರವನ್ನು ಸೇವಿಸುವುದು ಕಂಡುಬಂದಿದೆ. ಪುರುಷರ ಗುಂಪು ಅವರನ್ನು ನಿಂದಿಸುವುದು, ಹೇಳಿದ್ದು ಕೇಳದಿದ್ದರೆ ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಕೇಳಿಬಂದಿದೆ.
ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.
ಮತ್ತೊಂದು ವೀಡಿಯೊದಲ್ಲಿ ಹುಡುಗರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು , ಪ್ಯಾಂಟ್ ಅನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ., ಆದರೆ ಒಬ್ಬ ವ್ಯಕ್ತಿ ಅವರ ಗುದದ್ವಾರದಲ್ಲಿ ಹಸಿರು ಮೆಣಸಿನಕಾಯಿಯನ್ನು ಉಜ್ಜುವುದು ಹಾಗೂ ತಳ್ಳುವುದು. ನೋವಿನಿಂದ ಚೀರಾಡುತ್ತಿದ್ದ ಹುಡುಗರಿಗೆ ನಂತರ ಹಳದಿ ಬಣ್ಣದ ದ್ರವವನ್ನು ಚುಚ್ಚುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ "ಇಬ್ಬರು ಮಕ್ಕಳ ವಿರುದ್ಧ ಆಕ್ಷೇಪಾರ್ಹ ಕೃತ್ಯದ" ವೀಡಿಯೊವನ್ನು ತಕ್ಷಣವೇ ಗಮನಿಸಿದ್ದೇವೆ ಹಾಗೂ ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದವರನ್ನು ಗುರುತಿಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ತಿಳಿಸಿದ್ದಾರೆ.







