ಉತ್ತರ ಪ್ರದೇಶ: ದುಷ್ಕರ್ಮಿಗಳಿಂದ ಈದ್ಗಾ ಧ್ವಂಸ; ಪ್ರಕರಣ ದಾಖಲು

ಮುಝಾಫ್ಫರ್ ನಗರ: ಇಲ್ಲಿನ ಗ್ರಾಮವೊಂದರ ಈದ್ಗಾವನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.
ಈ ಘಟನೆಯು ಛರ್ತವಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥುರಾ ಗ್ರಾಮದಲ್ಲಿ ನಡೆದಿದ್ದು, ಈದ್ಗಾ ಹಾನಿಯಾಗಿರುವುದನ್ನು ಗಮನಿಸಿರುವ ಕೆಲವು ವ್ಯಕ್ತಿಗಳು, ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಮುಝಾಫ್ಫರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಪ್ರಜಾಪತ್, “ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ತಲುಪಿದಾಗ, ಈದ್ಗಾದ ಗುಮ್ಮಟಕ್ಕೆ ಹಾನಿಯಾಗಿರುವುದು ಕಂಡು ಬಂದಿದ್ದು, ಈ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದ್ದಾರೆ.
Next Story





