Uttar Pradesh | ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರಿಗೆ ಆಹಾರ ವಿತರಿಸುತ್ತಿದ್ದ ಸ್ವಯಂ ಸೇವಕ ಜುನೈದ್ ನಿವಾಸದ ಮೇಲೆ ಪೊಲೀಸ್ ದಾಳಿ; ಆರೋಪ

Photo | mediaoneonline
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರಿಗೆ ಆಹಾರ ಮತ್ತು ನೀರು ವಿತರಿಸುತ್ತಿರುವ ಸ್ವಯಂಸೇವಕ ಮುಹಮ್ಮದ್ ಜುನೈದ್ ಅವರ ಮನೆ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಳಿ ನಡೆಸಿ, ತಮ್ಮ ತಂದೆ, ಅಪ್ರಾಪ್ತ ಸಹೋದರ ಸೇರಿದಂತೆ ಕುಟುಂಬದ ಹಲವಾರು ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ ಎಂದು ಜುನೈದ್ ಆರೋಪಿಸಿದ್ದಾರೆ.
ದಿ ಲಲ್ಲಂಟಾಪ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೀರತ್ನಲ್ಲಿ ತಮ್ಮ ಸಹೋದರಿಯ ಮಾವ ಮತ್ತು ಆಕೆಯ ಗಂಡನ ತಮ್ಮನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ದಾಳಿಯ ವೇಳೆ ತಮ್ಮ ಕುಟುಂಬದ ಆಧಾರ್ ಕಾರ್ಡ್ಗಳು ಮತ್ತು ಬ್ಯಾಂಕ್ ಪಾಸ್ಬುಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜುನೈದ್ ಆರೋಪಿಸಿದ್ದಾರೆ.
ಚಳವಳಿಯಲ್ಲಿ ತಮ್ಮ ಭಾಗವಹಿಸುವಿಕೆಗೆ ಪ್ರತೀಕಾರವಾಗಿ ತಮ್ಮನ್ನು ಹಾಗೂ ಕುಟುಂಬದವರನ್ನು ಬೆದರಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Next Story




