ಉತ್ತರ ಪ್ರದೇಶ | ಅತ್ಯಾಚಾರಕ್ಕೊಳಗಾಗಿದ್ದ ಇಬ್ಬರು ಬಾಲಕಿಯರ ಮೃತದೇಹ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆ

Photo: PTI
ಕಾನ್ಪುರ: ಅತ್ಯಾಚಾರಕ್ಕೊಳಗಾದ ದಿನಗಳ ಬಳಿಕ, ಇಬ್ಬರು ಅಪ್ರಾಪ್ತ ಬಾಲಕಿಯರ ಮೃತದೇಹಗಳು ಮರವೊಂದರಿಂದ ನೇತಾಡುತ್ತಿದ್ದ ಸ್ಥಿತಿಯಲ್ಲಿ ಇಲ್ಲಿಗೆ ಸಮೀಪದ ಘಟಮ್ಪುರ ಪ್ರದೇಶದಿಂದ ವರದಿಯಾಗಿದೆ. ಅವರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಕಾರ್ಖಾನೆ ಸಮೀಪದ ಹೊಲದಲ್ಲಿರುವ ಮರದಲ್ಲಿ ಅವರ ದೇಹಗಳು ನೇತಾಡುತ್ತಿದ್ದವು.
ಇಟ್ಟಿಗೆ ಕಾರ್ಖಾನೆಯ ಗುತ್ತಿಗೆದಾರ ರಾಮ್ರೂಪ್ ನಿಶಾದ್ (48), ಅವನ ಮಗ ರಾಜು (18) ಮತ್ತು ಇನ್ನೋರ್ವ ಸಂಬಂಧಿಕ ಸಂಜಯ್ (19) ಆ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಬಾಲಕಿಯರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಆರೋಪಿಗಳು ಅತ್ಯಾಚಾರದ ವೀಡಿಯೊ ಮಾಡಿ ಬಾಲಕಿಯರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು ಎಂದು ಕುಟುಂಬಿಕರು ಹೇಳಿದ್ದಾರೆ.
Next Story





