ಪ್ರವಾಹದಿಂದ ಕೊಚ್ಚಿಹೋದ ಉತ್ತರಕಾಶಿ- ಚೀನಾಗಡಿ ಸಂಪರ್ಕ ಸೇತುವೆ

Photo: TOI
ಉತ್ತರಕಾಶಿ: ಜಿಲ್ಲೆಯ ಚೋರಗಡ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗುಸೇತುವೆ ಇತ್ತೀಚೆಗೆ ವ್ಯಾಪಕ ಪ್ರವಾಹದಿಂದಾಗಿ ಕೊಚ್ಚಿಕೊಂಡು ಹೋಗಿದೆ. ಗಂಗೋತ್ರಿ ನ್ಯಾಷನಲ್ ಪಾರ್ಕ್ ನ ನೆಲಾಂಗ್ ಕಣಿವೆ ಪ್ರದೇಶದ ತೂಗುಸೇತುವೆಯ ಎಂಬಾಕ್ ಮೆಂಟ್ ಕುಸಿದ ಪರಿಣಾಮ ಸೇತುವೆ ಕೊಚ್ಚಿಕೊಂಡು ಹೋಗಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಇದು ಭಾರತೀಯ ಸೇನೆ ಮತ್ತು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರಿಗೆ ಪ್ರಮುಖ ಪಾದಚಾರಿ ಸೇತುವೆಯಾಗಿದ್ದು, ಇದು ಹಿಮಾಚಲ ಪ್ರದೇಶದ ಮೂಲಕ ಉತ್ತರಕಾಶಿ ಮತ್ತು ಭಾರತ-ಚೀನಾ ಗಡಿಯನ್ನು ಸಂಪರ್ಕಿಸುತ್ತಿತ್ತು ಹಾಗೂ ಧೀರ್ಘ ದೂರದ ಗಸ್ತಿಗಾಗಿ ಇದನ್ನು ಬಳಸಲಾಗುತ್ತಿತ್ತು. ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯ ಕುರಿಗಾಹಿಗಳು ಕೂಡಾ ಇದನ್ನು ಬಳಸುತ್ತಿದ್ದರು.
ಚೋರಗಡ ನದಿಯ ಪ್ರವಾಹದಿಂದಾಗಿ ಈ ಸೇತುವೆ ಕೆಲ ದಿನಗಳ ಹಿಂದೆ ಕುಸಿದಿದೆ. ಸದ್ಯವೇ ಇದರ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಜಿಎನ್ಪಿ ಉಪನಿರ್ದೇಶಕ ಆರ್.ಎನ್.ಪಾಂಡೆ ಹೇಳಿದ್ದಾರೆ.
Next Story





