ವಿಜಯ್ ಹಝಾರೆ ಟ್ರೋಫಿ: ವಿದರ್ಭಗೆ 349 ರನ್ಗಳ ಗೆಲುವಿನ ಗುರಿ ನೀಡಿದ ಕರ್ನಾಟಕ

PC : X
ವಡೋದರ: ವಿಜಯ್ ಹಝಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಎದುರಾಳಿ ತಂಡ ವಿದರ್ಭಕ್ಕೆ 349 ರನ್ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದ ವಿದರ್ಭ ತಂಡವು, ಎದುರಾಳಿ ಕರ್ನಾಟಕ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 348 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಕರ್ನಾಟಕ ಪರ ಸಮರನ್ ರವಿಚಂದ್ರನ್ ಭರ್ಜರಿ ಶತಕದೊಂದಿಗೆ 101 ರನ್ ಸಿಡಿಸಿದರು. ಶ್ರೀಜಿತ್ 78, ಅಭಿನವ್ ಮನೋಹರ್ 79 ರನ್ ಬಾರಿಸುವ ಮೂಲಕ ಕರ್ನಾಟಕ ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.
Next Story





