ವಕ್ಫ್ ತಿದ್ದುಪಡಿ ಕಾಯ್ದೆ 2025 : ಸೋಮವಾರ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ತಡೆಯಾಜ್ಞೆ ಕುರಿತು ಆದೇಶ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ಸೆ.13: ಸರ್ವೋಚ್ಚ ನ್ಯಾಯಾಲಯವು ವಕ್ಫ್(ತಿದ್ದುಪಡಿ) ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡುವ ವಿಷಯದಲ್ಲಿ ಸೋಮವಾರ, ಸೆ.15ರಂದು ತನ್ನ ಆದೇಶವನ್ನು ಪ್ರಕಟಿಸಲಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು ಸೋಮವಾರ ಬೆಳಿಗ್ಗೆ 10:30ಕ್ಕೆ ಆದೇಶವನ್ನು ಪ್ರಕಟಿಸಲಿದೆ. ಕಾಯ್ದೆಯ ನಿಬಂಧನೆಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠವು ಮೇ 22ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಸರ್ವೋಚ್ಚ ನ್ಯಾಯಾಲಯವು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳನ್ನು ಆಲಿಸಿದ ಬಳಿಕ ‘ನ್ಯಾಯಾಲಯಗಳಿಂದ ವಕ್ಫ್ ಎಂದು ಘೋಷಿತ, ಬಳಕೆಯ ಕಾರಣದಿಂದ ವಕ್ಫ್ ಆಗಿರುವ ಅಥವಾ ಕ್ರಯಪತ್ರಗಳ ಮೂಲಕ ವಕ್ಫ್ ಎಂದು ಘೋಷಿಸಲಾಗಿರುವ’ ಆಸ್ತಿಗಳನ್ನು ಡಿ-ನೋಟಿಫೈ ಮಾಡುವ ಅಧಿಕಾರ ಸೇರಿದಂತೆ ಮೂರು ವಿಷಯಗಳ ಮೇಲೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
Next Story





