West Bengal | PMLA ಪ್ರಕರಣ: ಮಾಜಿ ಸಚಿವ ಇಂದ್ರನೀಲ್ ಸೇನ್ ನಿವಾಸದ ಮೇಲೆ ED ದಾಳಿ

Photo credit : aitcofficial.org
ಕೋಲ್ಕತ್ತಾ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ, ಪಶ್ಚಿಮ ಬಂಗಾಳದ ಮಾಜಿ ಸಚಿವ ಇಂದ್ರನೀಲ್ ಸೇನ್ ಮತ್ತು ಇತರರ ನಿವಾಸ ಹಾಗೂ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಶೋಧ ನಡೆಸಿದ್ದಾರೆ.
ದುರ್ಗಾ ಪೂಜೆಯ ಪೂರ್ವಭಾವಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಸಂಸ್ಥೆಯೊಂದರಲ್ಲಿ ನಡೆದ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನ್ ಅವರ ಪತ್ನಿಯ ನೇತೃತ್ವದ ಮಾಸ್ಆರ್ಟ್ (ಮಹಾನಿರ್ಬಾನ್ ರೋಡ್ ಮಾಸ್ ಆರ್ಟ್ ಸೊಸೈಟಿ) ಸಂಸ್ಥೆಯು, ಯುನೆಸ್ಕೊ ಪ್ರಾಯೋಜಿತ ಸಂಸ್ಥೆಗೆ ಎಂದು ಸುಳ್ಳು ಹೇಳಿ ಸಾರ್ವಜನಿಕರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿದೆ ಹಾಗೂ ಆ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ED ದಾಳಿಯ ಬಗ್ಗೆ ಇಂದ್ರನೀಲ್ ಸೇನ್ ಅಥವಾ ಮಾಸ್ ಆರ್ಟ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
Next Story




