ಟ್ರಾಫಿಕ್ ಜಾಮ್ ನಲ್ಲಿ ಸಿಲುಕುವುದಾದರೆ ಟೋಲ್ ಏಕೆ ಕಟ್ಟಬೇಕು?: ಸುಪ್ರೀಂ ಕೋರ್ಟ್ ಪ್ರಶ್ನೆ

Photo credit: PTI
ಕೇರಳ | ವಾರಾಂತ್ಯದಲ್ಲಿ 65 ಕಿ.ಮೀ. ಪ್ರಯಾಣಕ್ಕೆ 12 ಗಂಟೆಗಳ ಸಂಚಾರ ದಟ್ಟಣೆ!
ಹೊಸದಿಲ್ಲಿ: “ರಾಷ್ಟ್ರೀಯ ಹೆದ್ದಾರಿಯಲ್ಲಿ 65 ಕಿಲೋಮೀಟರ್ ಪ್ರಯಾಣಕ್ಕೆ 12 ಗಂಟೆಗಳ ಕಾಲ ಟ್ರಾಫಿಕ್ ದಟ್ಟಣೆ ಎದುರಿಸಬೇಕಾದರೆ, ಪ್ರಯಾಣಿಕರು ಏಕೆ ಟೋಲ್ ಶುಲ್ಕ ಪಾವತಿಸಬೇಕು?” ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಕೇರಳದ ತ್ರಿಶ್ಶೂರಿನ ಪಾಲಿಯೇಕ್ಕರ ಟೋಲ್ ಪ್ಲಾಝಾದಲ್ಲಿ ಟೋಲ್ ಸಂಗ್ರಹವನ್ನು ರದ್ದುಗೊಳಿಸಿರುವ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹಾಗೂ ಗುರುವಾಯೂರ್ ನ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸಭ್ಯದ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ, ವಾರಾಂತ್ಯದಲ್ಲಿ ಹೆದ್ದಾರಿಯಲ್ಲಿ 12 ಗಂಟೆಗಳವರೆಗೆ ವಾಹನ ದಟ್ಟಣೆ ಉಂಟಾಗುತ್ತದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ಪ್ರಕರಣ ಸಂಬಂಧಿತ ಅಂತಿಮ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿದೆ.
Next Story





